SlideShare une entreprise Scribd logo
1  sur  6
Télécharger pour lire hors ligne
ಕಾಸರಗೋಡಿನ ಹಿಂದೂ ಸಾಮಂತ ಅರಸು ಬಲ್ಲಾಳರು
ಭಾರತದ ಪಶ್ಚಿಮದ ಅರಬ್ಬೀ ಕಡಲಿನ ಕಿನಾರೆಯು ಪರಶುರಾಮ ಸೃಷ್ಟಿಯ 'ನಾಗಲೋಕ' ವೆಂದು ಪುರಾಣಗಳಲ್ಲಿ
ಗುರುತಿಸಲ್ಪಟ್ಟಿದೆ. ಉತ್ತರದ ಗೋಕರ್ಣದಿಂದ ಆರಂಭಿಸಿ ದಕ್ಷಿಣದಲ್ಲಿ ನೀಲೇಶ್ವರದ ವರೆಗೆ ವಿಸ್ತಾರವಾಗಿ ಹಬ್ಬಿದ ಈ ಪ್ರದೇಶವು
ಪುರಾತನ ಕಾಲದಿಂದಲೂ "ತೌಳವನಾಡು" ಅಥವಾ "ತುಳುನಾಡು" ಎಂದು ಪ್ರಸಿದ್ದಿ ಪಡೆದಿದೆ. ಭೂಮಾತೆ ಹಸಿರು ಸೀರೆಯನ್ನುಟ್ಟು
ಹಚ್ಚ ಹಸುರಾಗಿ ಕಂಗೊಳಿಸುತ್ತ, ನೋಡುಗರ ಕಣ್ಣಿಗೆ ಹಬ್ಬವನ್ನುಂಟುಮಾಡುವ ಈ ಸುಂದರ ಪ್ರಕೃತಿ ರಮಣೀಯ ಪ್ರದೇಶವು
ಅನೇಕ ರಾಜವಂಶಗಳ, ಪಾಳೆಯಗಾರರ ಆಡಳಿತವನ್ನು ಕಂಡಿದೆ. ಈ ನಾಡು ಉತ್ತಮ ಋತುಮಾನ ಹಾಗೂ ಸಕಲ ನೈಸರ್ಗಿಕ
ಸಂಪನ್ಮೂಲಗಳಿಂದೊಡಗೂಡಿದ "ಭೂ ಸ್ವರ್ಗ" ವೆಂದರೂ ತಪ್ಪಾಗಲಾರದು.
ಈ ತುಳುನಾಡಿನ ರಾಜಕೀಯ ಇತಿಹಾಸ ಬಹಳ ಪುರಾತನವಾದುದು. ಚಂದ್ರಗಿರಿ ನದಿಯ ಉತ್ತರ ಮತ್ತು ನೇತ್ರಾವತಿ ನದಿಯ
ದಕ್ಷಿಣ ಭಾಗ ಹಾಗು ಪೂರ್ವ ಘಟ್ಟದಿಂದ ಪಶ್ಚಿಮದ ಕಡಲಿನ ತನಕವಿರುವ ಭೂಭಾಗ ತೌಳವ ಮಾತೆಯ ಶಿರೋ ಭೂಷಣದಂತೆ
ಶೋಭಿಸುವ' ಕಾಸರಗೋಡು'. ಇಲ್ಲಿ ಅನೇಕ ರಾಜ ವಂಶಗಳು ಆಳ್ವಿಕೆ ಮಾಡಿದ್ದಾರೆ. ಆರಂಭದಲ್ಲಿ ರಾಜ್ಯಗಳೆಂದು ನಂತರದ
ಕಾಲಘಟ್ಟದಲ್ಲಿ ಸೀಮೆಗಳೆಂದು ವಿಭಾಗೀಕರಿಸಲಾಗಿತ್ತು. ಮದ್ರಾಸು ರಾಜ್ಯವು ಅಸ್ತಿತ್ವದಲ್ಲಿದ್ದಾಗ ದಕ್ಷಿಣ ಕನ್ನಡ ಜಿಲ್ಲೆಯ
ಭಾಗವಾಗಿದ್ದ, ಹಾಗೂ ಇತ್ತೀಚೆಗೆ ಕೇರಳ ರಾಜ್ಯಕ್ಕೆ ಸೇರಿಹೋದ ಕಾಸರಗೋಡು ತೌಳವ ನಾಡಿನ ಭಾಗವೇ ಆಗಿದೆ. ಇದರ
ವಿಸ್ತೀರ್ಣತೆ ಮಂಜೇಶ್ವರದಿಂದ ನೀಲೇಶ್ವರದವರೆಗೂ ಹಬ್ಬಿದೆ. ಬ್ರಿಟಿಷರ ಆಳ್ವಿಕೆಯ ನಂತರ ರೂಪುಗೊಂಡ ಮದ್ರಾಸು ರಾಜ್ಯ
ಅಂದರೆ, 1639 ರ ಮೊದಲಿನ ಆಡಳಿತ ಹಾಗೂ ನಂತರ ಈ ಭಾಗದಲ್ಲಿ ಕದಂಬ ಮೂಲದ ಅರಸು ಬಲ್ಲಾಳರ ಆಡಳಿತವಿತ್ತು.
ಅಲ್ಲದೆ ಪಲ್ಲವರು, ಚೋಳರು, ಅಳುಪರು ಕದಂಬರು, ವಿಜಯನಗರದ ಅರಸರು, ಇಕ್ಕೇರಿಯ ನಾಯಕರು, ಮೈಸೂರಿನ
ಹೈದರಾಲಿ, ಟಿಪ್ಪು ಸುಲ್ತಾನ್, ಆಮೇಲೆ ಬ್ರಿಟಿಷರು ಕೂಡ ಈ ಭೂಭಾಗದ ಮೇಲೆ ಅಧಿಪತ್ಯ ಸ್ಥಾಪಿಸಿದ್ದರು.1947 ರ
ಸ್ವಾತಂತ್ರ್ಯಾನಂತರ ಭಾಷಾವಾರು ಪ್ರಾಂತ್ಯ ವಿಂಗಡೆಣೆಯಯಾದ ಪರಿಣಾಮವಾಗಿ ದಕ್ಷಿಣ ಕನ್ನಡದ ಭಾಗವಾಗಿದ್ದ ಕಾಸರಗೋಡು
ಕೇರಳದ ಪಾಲಾಗುವ ಮೂಲಕ ತುಳುನಾಡಿನ ಮುಕುಟಮಣಿ ಕಳಚಿಹೋಯಿತು.
ತು(ಲು)ಳುನಾಡಿನ ಹಿಂದೂ ಸಾಮಂತ ಅರಸು ಬಲ್ಲಾಳರ ಹಿನ್ನಲೆ
ತುಳುನಾಡಿನ ಬಗ್ಗೆ ಅನೇಕ ಇತಿಹಾಸಕಾರರು, ಪ್ರವಾಸಿಗರು, ವಿದ್ವಾಂಸರು ಆಯಾ ಕಾಲಘಟ್ಟದಲ್ಲಿ ತಮಗೆ ದೊರೆತಿರುವ ಕೆಲವು
ಮೂಲಾಧಾರಗಳನ್ನು ಅಧ್ಯಯನ ಮಾಡಿ, ಕೆಲವೊಂದು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಆದರೆ, ನಿಖರವಾದ ಮತ್ತು ಹೆಚ್ಚಿನ
ಆಧಾರಗಳ ಅಭಾವದಿಂದ ತುಳುನಾಡಿನ ಭಾಗವಾದ ಕಾಸರಗೋಡನ್ನು ಅಂದರೆ 'ಕುಂಬಳೆ ಸೀಮೆ'ಯನ್ನು ಆಳಿದ 'ಹಿಂದೂ
ಸಾಮಂತ ಅರಸು ಬಲ್ಲಾಳ'ರ ಕುರಿತು ಸಂಶೋಧನೆಗಳು ನಡೆದುದು ವಿರಳಾತಿವಿರಳವೆಂದೇ ಹೇಳಬಹುದು.
ಶ್ರೀ ಗಣಪತಿ ರಾವ್ ಐಗಳು ಪ್ರಕಟಿಸಿದ "ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ", ಡಾ. ಗುರುರಾಜ ಭಟ್ಟರ "ಸ್ಟಡೀಸ್ ಇನ್
ತುಳುವ ಹಿಸ್ಟರಿ ಆಂಡ್ ಕಲ್ಚರ್", ಮತ್ತು ಕೇಶವ ಕೃಷ್ಣ ಕುದ್ವ, ಡಾ.ಕೆ.ಜಿ. ವಸಂತಮಾಧವ, ಡಾ.ಉಪ್ಪಂಗಳ ರಾಮಭಟ್ಟ, ಬಿ.ಎ.
ಸಾಲೆತ್ತೂರು, ಡಾ. ಕೆ.ವಿ ರಮೇಶ್, ಸದಾನಂದ ನಾಯಕ, ಡಾ.ಚನ್ನಕ್ಕ ಪಾವಟೆ, ಹೇರಂಜೆ ಕೃಷ್ಣ ಭಟ್ಟ, ಎಸ್. ಡಿ. ಶೆಟ್ಟಿ, ಯನ್.
ಎ. ಸೀನಪ್ಪ ಹೆಗಡೆ ಮೊದಲಾದವರೆಲ್ಲ ಸಂಶೋಧನೆ ಮಾಡಿ ತುಳುನಾಡಿನ ಬೇರೆಬೇರೆ ಕಡೆಗಳಲ್ಲಿರುವ ರಾಜವಂಶಗಳ ತೌಲನಿಕ
ಅದ್ಯಯನ ಮಾಡಿ 'ತುಳುನಾಡಿನ ಅರಸುಮನೆತನ'ಗಳ ಕುರಿತಾಗಿ ಬರೆದಿರುವ ಕೆಲವು ವಿಚಾರಗಳನ್ನು ಅವರ ಸಂಶೋಧನಾ
ಗ್ರಂಥಗಳಿಂದ ತಿಳಿಯಬಹುದಾಗಿದೆ. ಇವರಲ್ಲಿ ಕೆಲವು ಇತಿಹಾಸಕಾರರು ಕಾಸರಗೋಡಿನ 'ಬಲ್ಲಾಳ ವಂಶ' ಹಾಗೂ ತುಳುನಾಡಿನ
ಇತರ 'ಬಲ್ಲಾಳ ವಂಶ'ಗಳ ಕುರಿತಾಗಿ ಉಲ್ಲೇಖಿಸಿರುವ ವಿಚಾರಗಳನ್ನು ಗಮನಿಸಿದಾಗ 'ಕಾಸರಗೋಡಿನ ಬಲ್ಲಾಳ' ವಂಶವು ಇತರ
'ಬಲ್ಲಾಳ' ವಂಶಕ್ಕಿಂತ ಭಿನ್ನವಾಗಿದ್ದು ಇವರು 'ಜೈನ ಬಲ್ಲಾಳ'ರಲ್ಲ ಜೈನೇತರರಾಗಿದ್ದಾರೆ. ಎಂಬುದು ಸ್ಪಷ್ಟ. ಇದು ಗಣಪತಿ ರಾವ್
ಐಗಳ "ದಕ್ಷಿಣ ಕನ್ನಡದ ಪ್ರಾಚೀನ ಇತಿಹಾಸ" ಕೃತಿಯಲ್ಲಿ ಉಲ್ಲೇಖಿಸಲ್ಪಟ್ಟಿದೆ. ಈ ವಂಶದ ಅರಮನೆಗಳು, ಬೀಡುಗಳು ಅತ್ತ
ದಕ್ಷಿಣದ ಚಂದ್ರಗಿರಿಯಿಂದ ತೊಡಗಿ ಇತ್ತ ಉತ್ತರದ ಮಂಜೇಶ್ವರದವರೆಗೂ ಅಲ್ಲಲ್ಲಿ ಕಾಣಸಿಗುತ್ತವೆ. ಕೆಲವು ಇತಿಹಾಸಕಾರರು ಈ
ವಂಶವನ್ನು 'ಜೈನ'ರೆಂದು ಹೇಳಿದ್ದಾರೆ. ವಾಸ್ತವದಲ್ಲಿ ಇವರು ಜೈನೇತರರಾಗಿದ್ದು ವೈಷ್ಣವ ಮತಾವಲಂಬಿಗಳಾಗಿದ್ದಾರೆ. ವಿಷ್ಣು,
ದುರ್ಗೆ, ಗಣಪತಿ, ಶಾಸ್ತಾವು, ಸುಬ್ರಹ್ಮಣ್ಯ ಈ ವಂಶದ ಪ್ರಧಾನ ಆರಾಧನಾ ಶಕ್ತಿಗಳಾಗಿವೆ.
ಸಾಮಾನ್ಯವಾಗಿ 'ಜೈನ ಬಲ್ಲಾಳ'ರ ಆಳ್ವಿಕೆಯಿದ್ದ ಪ್ರದೇಶಗಳಲ್ಲಿ ಅವರ ಧಾರ್ಮಿಕ ಕೇಂದ್ರಗಳಾದ ಬಸದಿಗಳು, ಕಂಬಗಳು ಹಾಗೂ
ಇತರ ಸಾಂಸ್ಕೃತಿಕ ಕುರುಹುಗಳು ಕಾಣಸಿಗುತ್ತವೆ. ಆದರೆ, ಕಾಸರಗೋಡಿನ 'ಬಲ್ಲಾಳ' ವಂಶ ಹಾಗೂ ಅವರು ಸಾಗಿಬಂದ ದಾರಿ,
ಧರ್ಮ, ಸಂಸ್ಕೃತಿ, ಆಚಾರ, ವಿಚಾರ, ನಂಬಿಕೆಗಳೆಲ್ಲವೂ ತುಳುನಾಡಿನಲ್ಲಿ ಈ ಹಿಂದಿನಿಂದಲೇ ವಾಸವಾಗಿದ್ದ ಜನರಿಂದ
ವಿಭಿನ್ನವಾಗಿದೆ. ನೂರಾರು ವರ್ಷಗಳ ಹಿಂದೆ ಈ ಬಲ್ಲಾಳ ವಂಶದ ಜನಸಂಖ್ಯೆ ಅಧಿಕವಿದ್ದರೂ ಪ್ರಸ್ತುತ ಕೇವಲ ಸಾವಿರದಷ್ಟು
ಮಾತ್ರ ಸದಸ್ಯರನ್ನು ಹೊಂದಿರುವ ಅಲ್ಪಸಂಖ್ಯಾತರಾಗಿರುವರು. ಕುಂಬಳೆ ಸೀಮೆಯನ್ನಾಳಿದ ಅರಸು ವಂಶಸ್ಥರ ಪರಂಪರೆಯ
ಕೊಂಡಿಗಳಾದ ಈ ಬಲ್ಲಾಳರು ಸಾಧಾರಣ 1200 ವರ್ಷಗಳ ಇತಿಹಾಸವನ್ನು ಹೊಂದಿರುವರೆಂದು ಇತಿಹಾಸಕಾರರು
ಅಭಿಪ್ರಾಯಪಟ್ಟಿದ್ದಾರೆ. ಪ್ರಾಚೀನ ಕಾಲದಿಂದ ಇತ್ತೀಚೆಗಿನವರೆಗೆ ಜೈನ ಬಲ್ಲಾಳರು ಹಾಗೂ ಕಾಸರಗೋಡಿನ ಬಲ್ಲಾಳ ವಂಶಗಳು
ಮಾತ್ರವೇ 'ಬಲ್ಲಾಳ' ಎನ್ನುವ ಕುಲನಾಮದಿಂದ ಗುರುತಿಸಲ್ಪಡುತ್ತಿತ್ತು . ಆದರೆ ಈ ವಂಶಗಳು ಕೆಲವೊಂದು ಕಡೆಗಳಲ್ಲಿ
ನಶಿಸಿಹೋದ ಅನಂತರ ಇವರ ಸೈನಿಕರಾಗಿದ್ದ, ಅಥವಾ 'ಬಂಟ'ರಾಗಿದ್ದ ( ಬಂಟ= ಎಂದರೆ ಸೈನಿಕ ಎಂದರ್ಥ) ' ಬಂಟ
ಸಮುದಾಯವು ಬೀಡು, ಅರಮನೆಗಳನ್ನು ಪುನರುಜ್ಜೀವನಗೊಳಿಸಿ 'ಬಲ್ಲಾಳ' ಕುಲ ನಾಮವನ್ನು ಇರಿಸಿಕೊಂಡಿರುವುದರಿಂದ ಇವರು
ಇತಿಹಾಸದ ಪುಟಗಳಲ್ಲಿ 'ಬಂಟ ಬಲ್ಲಾಳ' ರೆಂಬ ಕುಲನಾಮದಿಂದ ಗುರುತಿಸಿಕೊಂಡರು. ಆದ್ದರಿಂದ ಇತ್ತೀಚೆಗಿನ ಇತಿಹಾಸಗಾರರು
'ಜೈನಬಲ್ಲಾಳ'ರನ್ನುಳಿದು ತುಳುನಾಡಿನಲ್ಲಿ 'ಬಂಟಬಲ್ಲಾಳ'ರು ಮಾತ್ರ ಇರುವುದೆಂಬ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ.
ಶತಶತಮಾನದಿಂದಲೇ ತುಳುನಾಡಿನಲ್ಲಿ ಜೈನರಿದ್ದರೂ ಹೊಯ್ಸಳರ ತರುವಾಯ 'ಬಲ್ಲಾಳ' ಎಂಬ ಕುಲನಾಮವು ಪ್ರಚಲಿತವಾಗಿ
ಕಂಡುಬರುತ್ತದೆ ಎಂಬುದಾಗಿ ಇತಿಹಾಸದ ಆಳವಾದ ಅಧ್ಯಯನದ ನಂತರ ತಿಳಿಯಲು ಸಾದ್ಯ. ಬಂಟ ಸಮುದಾಯವು
ಹಿಂದಿನಿಂದಲೇ ತುಳುನಾಡಿನಲ್ಲಿ 'ನಾಗ ವಂಶಜ'ರೆಂದು ಕರೆಯಲ್ಪಡುತ್ತಿದ್ದರು. ಅನಂತರ ಈ ತುಳುನಾಡನ್ನು ಆಳಿದ ಎಲ್ಲ
ರಾಜವಂಶಸ್ಥರ ಸೇನಾನಿಗಳಾಗಿ ಮೆರೆದರು. ಆದ್ದರಿಂದ ಅಳುಪ ಅರಸರು, ಕದಂಬರು, ವಿಜಯನಗರದ ಅರಸರು ತುಳುನಾಡನ್ನು
ಆಳ್ವಿಕೆ ಮಾಡುವಾಗಲೂ ಇವರೇ ಅವರ ಸೇನಾನಿಗಳಾಗಿದ್ದರು. ಅಳುಪ ಅರಸರು ನಾಗವಂಶಸ್ಥರ ಸಂಬಂಧವನ್ನು ಬೆಳೆಸಿದ
ಮೇಲೆ ಈ ನಾಗ ವಂಶಜರು 'ಬಂಟ' ಯಾ ಅಳುಪರು(ಆಳ್ವರು) ಎಂಬ ಕುಲನಾಮದಿಂದ ಕರೆಯಲ್ಪಟ್ಟರು. ಇದರ ಹೊರತಾಗಿ
ಕಾಸರಗೋಡಿನಲ್ಲಿರುವ ಬಲ್ಲಾಳ ವಂಶವನ್ನು, ಈ ನಾಗ ವಂಶಜರಿಗೆ ಹೋಲಿಸಿ ಅವೆರಡು ಒಂದೇ ಅಥವಾ ಇವರು 'ಬಂಟ
ಬಲ್ಲಾಳ'ರೆಂಬುದಾಗಿ ಊಹಿಸಿ ವ್ಯಾಖ್ಯಾನಿಸಿದ್ದು ಸತ್ಯಕ್ಕೆ ದೂರವಾದ ವಿಚಾರ. ಯಾಕೆಂದರೆ ಈ ಅಭಿಪ್ರಾಯಕ್ಕೆ ಪೂರಕವಾಗಿ
'ಕೈಯಾರ ಕಿಞ್ಞಣ್ಣ ರೈ'ಗಳು ತಮ್ಮ ಲೇಖನದಲ್ಲಿ 'ಬಲ್ಲಾಳ'ರು ಅಳಿದು ಹೋದ ಬೀಡುಗಳಲ್ಲಿ ಬಂಟರು ಅಧಿಕಾರವನ್ನು ಸ್ಥಾಪಿಸಿ
'ಬಂಟ ಬಲ್ಲಾಳ' ರೆಂದು ಕರೆಸಿಕೊಂಡರು ಎಂದು ಹೇಳಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಈ 'ಬಲ್ಲಾಳ' ವಂಶದ ಇತಿಹಾಸವನ್ನು ಅಧ್ಯಯನದ ದೃಷ್ಟಿಯಿಂದ ಮೂರು ವಿಭಾಗಗಳಾಗಿ ವಿಂಗಡಿಸಬಹುದು. ೧)ಪ್ರಾಚೀನ
ಕಾಲಘಟ್ಟ, ೨) ಮಧ್ಯಾವಧಿ ಕಾಲಘಟ್ಟ, ಹಾಗೂ ೩) ಆಧುನಿಕ ಕಾಲಘಟ್ಟ ಎಂಬುದಾಗಿ. ಡಾ.ರಾಮ ಭಟ್, ಹೇರಂಜೆ ಕೃಷ್ಣಭಟ್,
ಹಾಗು ಗುರುರಾಜ ಭಟ್ ಮೊದಲಾದ ಸಂಶೋಧಕರಿಗೆ ಮೂಲಾಧಾರಗಳ ಕೊರತೆಯಿಂದಾಗಿ ಮೇಲಿಂದ ಮೇಲೆ ಈ ವಿಚಾರವನ್ನು
ಕುರಿತು ಬರೆಯಲು ಸಾದ್ಯವಾಗಿದೆಯೇ ಹೊರತು ಆಳವಾದ ಸಂಶೋಧನೆ ನಡೆಸಲಾಗಲಿಲ್ಲ. ಇದಕ್ಕೆ ಇನ್ನೊಂದು ಕಾರಣ
ಕಾಸರಗೋಡಿನ ಬಲ್ಲಾಳ ವಂಶವು ಶತಮಾನಗಳಿಂದಲೇ ಜೀವಂತವಾಗಿರುವುದೂ ಆಗಿರಬಹುದು. ಇತಿಹಾಸಕಾರರಾದ ಗಣಪತಿ
ಐಗಳು ತನ್ನ ಸಂಶೋಧನಾ ಗ್ರಂಥದಲ್ಲಿ 'ಕಾಸರಗೋಡಿನ ಈ ಬಲ್ಲಾಳ ವಂಶವು ಜೈನೇತರರೆಂದೂ ಹಾಗು ಮತ್ತೊಬ್ಬ ಹಿರಿಯ
ಸಂಶೋದಕ ಡಾ! ರಾಮಭಟ್ಟರು ಇವರು(ಬಲ್ಲಾಳರು) ಕದಂಬ ವಂಶದವರಾಗಿರಲೂಬಹುದು. ಏಕೆಂದರೆ 12ನೇ ಶತಮಾನದ
ತರುವಾಯ ಹೊಯ್ಸಳರ ಪ್ರಭಾವದಿಂದ 'ಬಲ್ಲಾಳ' ಕುಲ ನಾಮವನ್ನು ಇರಿಸಿಕೊಂಡಿರಬಹುದೆಂದು ಹೇಳಿದ್ದಾರೆ'. ಈ ನಿಟ್ಟಿನಲ್ಲಿ ಈ
ವಂಶದ ಕೆಲವೊಂದು ಹಿರಿಯರನ್ನು ಹಾಗು ಅರಸರನ್ನು ಸಂದರ್ಶನ ನಡೆಸಿದಾಗ ಮೇಲಿನ ಸಂಶೋಧಕರು ನೀಡಿದ
ಮಾಹಿತಿಯಲ್ಲಿ ಸತ್ಯಾಂಶವಿರುವುದು ಕಂಡುಬರುತ್ತದೆ. ಇದಕ್ಕೂ ಮೊದಲು ಕಾಸರಗೋಡಿನ ನಿವೃತ್ತ ಜಿಲ್ಲಾಧಿಕಾರಿ ಹಾಗು
ಲೇಖಕರಾದ ದಿ.ಲಕ್ಷ್ಮಣ ಬಲ್ಲಾಳರು ಬರೆದ "ಹಿಂದೂ ಸಾಮಂತ ಅರಸರು ಹಾಗೂ ತುಳುನಾಡು" ಎಂಬ ತನ್ನ ಲೇಖನದಲ್ಲಿ ಈ ಬಗ್ಗೆ
ಸ್ಪಷ್ಟವಾದ ಮಾಹಿತಿಯನ್ನು ನೀಡಿದ್ದಾರೆ. ಅದೇ ರೀತಿ ಹಿರಿಯ ಕವಿಗಳೂ, ಸಂಶೋಧಕರೂ ಆದ ದಿವಂಗತ ಮರಿಯಯ್ಯ
ಬಲ್ಲಾಳರು ಹಲವಾರು ಸಂಶೋಧಕರೊಂದಿಗೆ ಚರ್ಚಿಸಿ ಈ ಜೈನೇತರ ಅರಸು ಬಲ್ಲಾಳರ ಇತಿಹಾಸದ ಬಗ್ಗೆ ಹಲವಾರು
ಮಾಹಿತಿಗಳನ್ನು ಒದಗಿಸಿ ಕೊಟ್ಟಿದ್ದಾರೆ. ಅಲ್ಲದೆ, ಸ್ಥಳಪುರಾಣ, ಐತಿಹ್ಯ ಹಾಗೂ ಕೆಲವು ಮಹಾತ್ಮೆಗಳಿಂದಲೂ ಲಭಿಸುವಂತಹ
ಮಾಹಿತಿಗಳಿಂದ ಕಾಸರಗೋಡಿನ "ಹಿಂದೂ ಸಾಮಂತರಸು ಬಲ್ಲಾಳ"ರ ಬಗೆಗಿನ ಇತಿಹಾಸವನ್ನು ತಿಳಿಯಬಹುದಾಗಿದೆ.
.
ಪ್ರಾಚೀನ ಇತಿಹಾಸ
ಗ್ರಾಮ ಪದ್ಧತಿಯ ಎರಡನೇ ಭಾಗದಲ್ಲಿ ತುಳುನಾಡಿನಲ್ಲಿ ಕದಂಬ ರಾಜ ಮಯೂರ ವರ್ಮನು ಋಷಿ ಮುನಿಗಳ ಉಪದೇಶದಂತೆ
ಅಹಿಛ್ಛತ್ರದಿಂದ 32 ಬ್ರಾಹ್ಮಣ ಕುಟುಂಬಗಳನ್ನು ತುಳುನಾಡಿಗೂ, ಅರುವತ್ತನಾಲ್ಕು ಕುಟುಂಬಗಳನ್ನು ಕೇರಳಕ್ಕೂ
ಬರಮಾಡಿಕೊಳ್ಳುತ್ತಾನೆ. ಈ ಅಹಿಛ್ಛತ್ರವು ಗೋದಾವರಿ ನದಿ ತೀರದಲ್ಲಿದೆ. ತುಳುನಾಡಿನಲ್ಲಿ ಮೊದಲೇ ಇದ್ದ ಕೆಲವು ಪಂಗಡಗಳ
ಮಧ್ಯೆ ಸಂಘರ್ಷಗಳು ನಡೆಯುತ್ತಿದ್ದರೂ ಅಹಿಕ್ಷೇತ್ರದಿಂದ ಬಂದ ಬ್ರಾಹ್ಮಣರಿಗೆ ಭೂಮಿಯನ್ನು ಉಂಬಳಿ ನೀಡಿ ನೆಲೆ ಮಾಡಿದ.
ಅಲ್ಲದೆ ಅವರ ಕೆಲಸಕ್ಕೆ ನಾಯರ್ ಜನಾಂಗ ಮತ್ತು ತುಳುನಾಡಿನ ನಾಗ ವಂಶದವರನ್ನು ನಿಯಮಿಸಿದ. ತರುವಾಯ ಮಯೂರ
ವರ್ಮನು ತನ್ನ ಮಗನಾದ ಚಂದ್ರಾಂಗದನಿಗೆ ರಾಜ್ಯಾಧಿಕಾರವನ್ನು ಬಿಟ್ಟುಕೊಟ್ಟು ತಾನು ಕಾಡಿಗೆ ಮರಳಿದ. ಮಯೂರವರ್ಮನು
ಇಲ್ಲದ ರಾಜ್ಯದಲ್ಲಿ ನಾವಿರುವುದು ಬೇಡವೆಂದು ಬ್ರಾಹ್ಮಣ ಪಂಗಡಗಳು ಅಹಿಛ್ಛತ್ರಕ್ಕೆ ಮರಳಿದರು. ಈ ಸಂದರ್ಭದಲ್ಲಿ
ಚಂದ್ರಾಂಗದನು ತುಳುನಾಡಿನ ಗ್ರಾಮ ಪದ್ಧತಿಗೆ ಸಂಬಂಧಿಸಿದಂತೆ ಬ್ರಾಹ್ಮಣರ ಅನುಪಸ್ಥಿತಿಯಿಂದ ತೊಂದರೆಯಾದಾಗ ಮತ್ತೆ
ಅಧಿಕ ಬ್ರಾಹ್ಮಣ ಕುಟುಂಬಗಳನ್ನು ಬರಮಾಡಿಕೊಂಡನು.
ಇತ್ತ ಕದಂಬ ರಾಜ ಚಂದ್ರಾಂಗದನ ಆಡಳಿತವು ಕ್ಷೀಣಿಸುತ್ತಾ ಬಂದಾಗ ತನ್ನ ಸೀಮಿತ ಪ್ರದೇಶದಲ್ಲಿ ಆಳ್ವಿಕೆಯನ್ನು ಮಾಡುತ್ತಿದ್ದ
'ಹುಬ್ಬಸಿ'ಗ ಎನ್ನುವ ಶೂದ್ರ ರಾಜನು ಎಲ್ಲಾ ಮೇಲ್ವರ್ಗದ ಬ್ರಾಹ್ಮಣರನ್ನು ಹಿಂಸಿಸತೊಡಗಿದನು. ಈ ಕಾರಣದಿಂದ ಹಲವು
ಬ್ರಾಹ್ಮಣ ಪಂಗಡಗಳು ತುಳುನಾಡನ್ನು ಬಿಟ್ಟು ತಮ್ಮ ಮೂಲ ಸ್ಥಳಕ್ಕೆ ವಲಸೆ ಹೋಗಲಾರಂಭಿಸಿದರು. ಇದರಿಂದ ಕುಪಿತನಾದ
ಚಂದ್ರವರ್ಮನ ಮಗ ಲೋಕಾದಿತ್ಯನು ಹುಬ್ಬಸಿಗನನ್ನು ಕೊಂದು ಅಹಿಛ್ಛತ್ರದಿಂದ ಮತ್ತೆ ಬ್ರಾಹ್ಮಣರನ್ನು ಬರಮಾಡಿಕೊಂಡನು.
ಹಾಗೂ ಅವರಿಗೆ ಮರಳಿ ಅಗ್ರಹಾರಗಳನ್ನು ಒಪ್ಪಿಸಿದನು. ಆ ಕಾಲಘಟ್ಟದಲ್ಲಿ ತುಳು ನಾಡಿನ ಭಾಗವಾಗಿದ್ದ ತಾಳಗುಂದ ಮತ್ತು
ಕುಪ್ಪಗದ್ದೆಯಲ್ಲಿ ಹಲವಾರು ಬ್ರಾಹ್ಮಣ ಪಂಗಡಗಳು ಅಹಿಚ್ಛತ್ರದಿಂದ ಬಂದು ನೆಲೆಯೂರಿದ್ದವು. ಸುಮಾರು ಹನ್ನೊಂದನೇ
ಶತಮಾನದಲ್ಲಿ ಚೋಳರು ಆಕ್ರಮಣ ಮಾಡಿ ತಾಳಗುಂದವನ್ನು ವಶಪಡಿಸಿ ಅಲ್ಲಿನ ಬ್ರಾಹ್ಮಣರ ಪತ್ನಿಯರ, ಮಕ್ಕಳ ಮೇಲೆ
ಅತ್ಯಾಚಾರ ಮಾಡಿದರು. ಅಲ್ಲದೆ ಅವರ ಪತ್ನಿಯರನ್ನು ಬಲಾತ್ಕಾರವಾಗಿ ತಮ್ಮ ರಾಣಿಯರನ್ನಾಗಿ ಮಾಡಿಕೊಂಡರು. ಈ
ಆಕ್ರಮಣದಿಂದ ಭಯಭೀತರಾದ ಬ್ರಾಹ್ಮಣ ಪಂಗಡಗಳು ತುಳು ನಾಡಿಗೆ ವಲಸೆ ಬಂದರು. ಇಲ್ಲಿ ಕದಂಬ ರಾಜರ ಗ್ರಾಮ
ಪದ್ಧತಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡರು. ಮತ್ತು ಕೆಲವು ಕುಟುಂಬಗಳು ಅರಸುಮನೆತನದೊಂದಿಗೆ ವೈವಾಹಿಕ ಸಂಬಂಧವನ್ನು
ಬೆಳೆಸಿದರು. ಕ್ರಮೇಣ ತುಳುನಾಡಿನಲ್ಲಿ ಗ್ರಾಮಣಿಗಳಾಗಿ ಮುಂದುವರೆದರು.
ಡಾ.ಜಾರ್ಜ್ ಯಂ ಮೊರೇಸ್ ರವರು ತನ್ನ ಸಂಶೋಧನಾ ಗ್ರಂಥವಾದ "A History of Ancient
and Mediaeval Karnataka" ದಲ್ಲಿ "ಕದಂಬರಾಜನ ಕೋರ್ಟಿನಲ್ಲಿ ಮಾಂಡಲಿಕರು, ಮಂತ್ರಿಗಳು, ಇತರ ಅಧಿಕಾರಿಗಳು
ಭಾಗವಹಿಸುತ್ತಿದ್ದರು. ಅವರೆಲ್ಲ ರಾಜನ ಹತ್ತಿರದ ಸಂಬಂಧಿಗಳಾಗಿರುತ್ತಿದ್ದರು. ಈ ಮೂಲಕ ಆಡಳಿತವು ಸುಸೂತ್ರವಾಗಿ
ನಡೆಯುತ್ತಿತ್ತು. ಕಠಿಣ ಸಂದರ್ಭಗಳಲ್ಲಿ ಒಳ್ಳೆಯ ಆಡಳಿತಾತ್ಮಕ ಪರಿಜ್ಞಾನ ವನ್ನು ಹೊಂದಿರುವ ಐದು ಜನರ ಕ್ಯಾಬಿನೆಟ್ ನ್ನು ರಚಿಸಿ
ಆಡಳಿತವನ್ನು ನಡೆಸುತ್ತಿದ್ದರು. ಆಡಳಿತ ವ್ಯವಸ್ಥೆಯನ್ನು ಸುಲಭವಾಗಿಸುವ ಸಲುವಾಗಿ ರಾಜ್ಯವನ್ನು ನಾಲ್ಕಾಗಿ ವಿಂಗಡನೆ
ಮಾಡಲಾಗಿತ್ತು. ಅದು ಪಶ್ಚಿಮ, ಉತ್ತರ, ದಕ್ಷಿಣ, ಪೂರ್ವಗಳೆಂದು. ಮತ್ತು ಇದಕ್ಕೆ ತನ್ನ ಸಂಬಂಧಿಕರನ್ನು ಅಧಿಕಾರಿಗಳನ್ನಾಗಿ
ನೇಮಿಸುತ್ತಿದ್ದರು. ಆಮೇಲೆ ಇದನ್ನು ಜಿಲ್ಲೆ , ತಾಲೂಕು, ಗ್ರಾಮಗಳಾಗಿ ವಿಂಗಡಿಸಿ ಆಡಳಿತವನ್ನು ಮಾಡುತ್ತಿದ್ದರು." ಎಂಬುದಾಗಿ
ಉಲ್ಲೇಖಿಸಿದ್ದಾರೆ. ಗ್ರಾಮ ಪದ್ಧತಿಯಲ್ಲಿ ಆಡಳಿತಾರೂಢ ಕದಂಬ ರಾಜನೊಡನೆ ಹಾಗೂ ಕದಂಬ ವಂಶದೊಂದಿಗೆ ತಾಳಗುಂದ
ಹಾಗೂ ಕುಪ್ಪಗದ್ದೆಯಿಂದ ವಲಸೆ ಬಂದ ಕೆಲವು ಬ್ರಾಹ್ಮಣರು ವೈವಾಹಿಕ ಸಂಬಂಧವನ್ನು ಬೆಳೆಸಿ ಅವರೊಂದಿಗೆ ರಾಜಕೀಯ
ವ್ಯವಸ್ಥೆಯಲ್ಲಿ ತಮ್ಮನ್ನೂ ತೊಡಗಿಸಿಕೊಂಡರು. ಮುಂದೆ ಈ ವಂಶವು ಕಾಸರಗೋಡಿನ 'ಬಲ್ಲಾಳ' ವಂಶವೆಂದು ಕರೆಯಲ್ಪಟ್ಟಿತು.
'ಬಲ್ಲಾಳ' ಎಂಬ ಕುಲನಾಮ ಬರಲು ಹೊಯ್ಸಳರ ಪ್ರಭಾವವೇ ಕಾರಣವಾಗಿರಬೇಕು. ಈಗಲೂ ಇವರು 'ವರ್ಮ', 'ಬಲ್ಲಾಳ' ಎಂಬ
ಎರಡೂ ಕುಲನಾಮಗಳಿಂದ ಕರೆಯಲ್ಪಡುತ್ತಿದ್ದಾರೆ. ಇದನ್ನು ಹಲವಾರು ಇತಿಹಾಸಕಾರರು ತಮ್ಮ ಬರಹಗಳಲ್ಲಿ ಉಲ್ಲೇಖಿಸಿದ್ದಾರೆ.
ಆದರೆ ಸರಿಯಾದ ಪುರಾವೆಗಳಿಲ್ಲದೆ ಕೆಲವು ಸಂಶೋಧಕರು ತುಳುನಾಡಿನ ರಾಣಿಯರು ಹಾಗೂ ಬ್ರಾಹ್ಮಣ ರೊಂದಿಗೆ ವೈವಾಹಿಕ
ಸಂಪರ್ಕದಿಂದ ಜನಿಸಿದ ಪರಂಪರೆಯೇ 'ಬಂಟ ಬಲ್ಲಾಳ'ರು ಎಂಬುದಾಗಿ ತಪ್ಪಾಗಿ ವಿವರಿಸಿದ್ದಾರೆ. ಇಲ್ಲಿ ವಾಸಿಸುವ 'ಬಲ್ಲಾಳ'
ವಂಶವು ಜೈನೇತರರಾಗಿದ್ದು ನಾಗವಂಶಕ್ಕೆ ಸೇರಿದವರಲ್ಲವಾದುದರಿಂದ ಬ್ರಾಹ್ಮಣರೊಂದಿಗಿನ ವೈವಾಹಿಕ ಸಂಬಂಧದಿಂದ 'ಬಂಟ
ಬಲ್ಲಾಳ' ರಾದರು ಎಂಬುದಕ್ಕೆ ಯಾವುದೇ ಅರ್ಥವಿಲ್ಲ. ಬ್ರಾಹ್ಮಣರು ಮತ್ತು ಬಂಟರು ಸೇರಿದರೆ 'ಬಂಟ ಬ್ರಾಹ್ಮಣ'ರಾಗಬೇಕೆ ವಿನಃ
'ಬಲ್ಲಾಳ' ಎಂಬ ಹೊಸ ನಾಮವೋ, ವಂಶವೋ ಹುಟ್ಟಿಕೊಳ್ಳುವುದಾದರೂ ಎಂತು? ಎಂಬುದು ಜಿಜ್ಞಾಸೆಗೆ ನಿಲುಕದ ವಿಚಾರ.
12ನೇ ಶತಮಾನದ ತರುವಾಯ
ಹನ್ನೊಂದನೇ ಶತಮಾನದಲ್ಲಿ ಹೊಯ್ಸಳರು ಪ್ರಬಲರಾಗಿ ಕರ್ನಾಟಕದ ಚಕ್ರವರ್ತಿಗಳಾದಾಗ ತುಳುನಾಡು ಅವರ ಕೈಸೇರಿತು.
ಕುಂಬಳೆ ಕೋಟೆಯಲ್ಲಿ ಹೊಯ್ಸಳ ವೀರಬಲ್ಲಾಳನ ಚಿನ್ನದ ನಾಣ್ಯ ಸಿಕ್ಕಿದ್ದು ಇದಕ್ಕೆ ಸಾಕ್ಷಿಯನ್ನು ಒದಗಿಸುತ್ತದೆ. ಈ ಪ್ರದೇಶ
ಹೊಯ್ಸಳ ಬಲ್ಲಾಳರ ಅಧಿಕಾರಕ್ಕೆ ಒಳಪಟ್ಟಾಗ ಈಗಾಗಲೇ ಅಲ್ಲಿ ಆಡಳಿತವನ್ನು ನಡೆಸುತ್ತಿದ್ದ ಕದಂಬ ರಾಜವಂಶದವರು
ಹೊಯ್ಸಳರ ಪ್ರಭಾವದಿಂದ 'ಬಲ್ಲಾಳ' ಎನ್ನುವ ಕುಲನಾಮವನ್ನು ಪಡೆದಿರಬಹುದು ಎಂಬುದಾಗಿ ಡಾ. ರಾಮಭಟ್ಟರು
ಅಭಿಪ್ರಾಯಪಟ್ಟಿದ್ದಾರೆ. ಕಾಸರಗೋಡು ಹೊರತಾಗಿ ತುಳುನಾಡಿನ ಇತರ ಕಡೆಗಳಲ್ಲಿ ನೆಲೆಸಿದ ಕೆಲವು ಅರಸರು ಜೈನ
ಬಲ್ಲಾಳರಾಗಿಯೂ ಅಲ್ಲದೆ ಆಳುವ ಅಧಿಕಾರವಿದ್ದ ಪಟ್ಟ ಬಂಟರೊಂದಿಗಿನ ವೈವಾಹಿಕ ಸಂಬಂಧವನ್ನು ಹೊಂದಿ 'ಜೈನಬಲ್ಲಾಳ'ರು
'ಬಂಟಬಲ್ಲಾಳ'ರಾಗಿರಬೇಕೆಂದು ಇತಿಹಾಸಕಾರರು ಅಭಿಪ್ರಾಯ. ಇವರು ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಇಂದಿಗೂ ಅರಸರಿಗೆ
ಸಲ್ಲಬೇಕಾದ ಗೌರವವನ್ನು ಪಡೆಯುತ್ತಿದ್ದಾರೆ.
12ನೇ ಶತಮಾನದಲ್ಲಿ ಮಧ್ವರ ಆಗಮನದ ನಂತರ ತುಳುನಾಡಿನಲ್ಲಿ ವೈಷ್ಣವ ದೇವಾಲಯಗಳು ಅಲ್ಲಲ್ಲಿ ನಿರ್ಮಾಣಗೊಂಡವು.
14ರಿಂದ 16 ನೇ ಶತಮಾನದ ಕಾಲಘಟ್ಟದಲ್ಲಿ ತುಳುನಾಡಿನ ಕೆಲವೊಂದು ಸೀಮೆಗಳು ಬಲ್ಲಾಳರ ಆಡಳಿತಕ್ಕೊಳಪಟ್ಟಿತ್ತು.
ಅನಂತರ ಇಕ್ಕೇರಿ ಅರಸರು ಹಾಗೂ ಟಿಪ್ಪುವಿನ ಆಕ್ರಮಣದ ತರುವಾಯ ತುಳುನಾಡಿನ ಎಲ್ಲಾ ಅರಸುಮನೆತನಗಳು
ಸ್ಥಿತ್ಯಂತರವಾಗಿ ಹೋದವು. ಟಿಪ್ಪು ತುಳುನಾಡಿನ ಮೇಲೆ ದಂಡೆತ್ತಿ ಬಂದು ಇಲ್ಲಿನ ಅರಮನೆಗಳನ್ನೂ,ಬೀಡುಗಳನ್ನೂ
ಧ್ವಂಸಗೊಳಿಸಿದನು. ಜೊತೆಗೆ ಇದರ ಅಧಿಪತ್ಯದಲ್ಲಿದ್ದ ದೇವಾಲಯಗಳನ್ನೂ ನಾಶಮಾಡಿದನು. ಈ ಸಂದರ್ಭದಲ್ಲಿ ಅಳಿದುಳಿದ
ಕೆಲವು ಅರಸುಮನೆತನಗಳು ದಿಕ್ಕುಕಾಣದೆ ಜನ ನಿಬಿಡ ಪ್ರದೇಶಗಳಿಗೆ ಓಡಿ ಹೋಗಿ ಬೀಡುಗಳನ್ನು ನಿರ್ಮಿಸಿ
ವಾಸಿಸತೊಡಗಿದರೆಂಬುದಾಗಿ ಊಹಿಸಬಹುದಾಗಿದೆ. ಟಿಪ್ಪುವಿನ ಮರಣಾನಂತರ ಅಂದರೆ ಸುಮಾರು 1799ರ ಬಳಿಕ ಬಲ್ಲಾಳರು
ತಾವು ಕಳೆದುಕೊಂಡ ಸಾಮ್ರಾಜ್ಯವನ್ನು ಮರು ಸ್ಥಾಪಿಸಲು ಎಷ್ಟೇ ಪ್ರಯತ್ನಿಸಿದರೂ ಅದು ಸಫಲವಾಗಲಿಲ್ಲ. ಯಾಕೆಂದರೆ ಹೆಚ್ಚಿನ
ಪ್ರದೇಶಗಳು ಪರಕೀಯರ ಅಧೀನಕ್ಕೆ ಸೇರಿಹೋಗಿತ್ತು. ಆಮೇಲೆ ಬ್ರಿಟಿಷ್ ಸರ್ಕಾರ ಆಡಳಿತಕ್ಕೆ ಬಂದು ಭೂಮಿಗೆ
ಸಂಬಂದಿಸಿದಂತೆ ಕೆಲವು ಕಾನೂನುಗಳನ್ನು ಜಾರಿಗೊಳಿಸಿದರು. ಅದರಂತೆ "ಲ್ಯಾಂಡ್ ರಿಫಾರ್ಮ್ ಆಕ್ಟ್ " ಜಾರಿಗೆ ಬಂದ ನಂತರ
ಬಲ್ಲಾಳ ವಂಶಗಳ ಅಧೀನದಲ್ಲಿದ್ದ ಭೂಮಿಯು ಪರಕೀಯರ ಪಾಲಾಗಿ ಹೋಯಿತು. ಆಮೇಲೆ ಇವರಲ್ಲಿ ಕೆಲವರು ಬ್ರಿಟಿಷ್ ಸರ್ಕಾರದ
ಕೈಕೆಳಗೆ ಗ್ರಾಮಣಿಗಳಾಗಿ ಕೆಲಸ ನಿರ್ವಹಿಸಲಾರಂಭಿಸಿದರು.
ತುಳುನಾಡಿನಲ್ಲಿ ಇರುವಂತಹ ಅರಮನೆಗಳು ನಶಿಸಿ ಹೋದರೂ 'ಬಲ್ಲಾಳರಸರು' ನಿರ್ಮಿಸಿ, ನಂಬಿಕೊಂಡು ಬಂದಿರುವಂತಹ
ದೇವಾಲಯಗಳಲ್ಲಿ ಇಂದಿಗೂ ಅಷ್ಟಮಂಗಲ ಪ್ರಶ್ನೆಗಳು ನಡೆದಾಗ ಈ ದೇವಸ್ಥಾನವು 'ಬಲ್ಲಾಳರಸ'ರಿಂದ ನಿರ್ಮಿಸಲ್ಪಟ್ಟಿದ್ದೆಂದು
ಕಂಡುಬರುತ್ತದೆ. ಎಂದು ಹೇಳುವುದನ್ನು ಗಮನಿಸಬಹುದು. ಹದಿನೆಂಟನೇ ಶತಮಾನದ ಆದಿಯಲ್ಲಿ ಕುಂಬಳೆ ಅರಸರ ಇನ್ನೊಂದು
ವಿಭಾಗವು ಆಡಳಿತದಿಂದ ಬೇರ್ಪಟ್ಟು ಸ್ವತಂತ್ರವಾಗಿ ಸುಮಾರು 1808 ರಿಂದ ತಮ್ಮನ್ನು 'ರಾಮಂತರಸರು' ಎಂಬುದಾಗಿ
ಕರೆಯಿಸಿಕೊಂಡು ಮಾಯಿಪ್ಪಾಡಿ ಅರಮನೆಯನ್ನು ನಿರ್ಮಿಸಿ ವಾಸ ಮಾಡತೊಡಗಿದರೆಂಬುದು ಇತಿಹಾಸಕಾರರ ಅಭಿಪ್ರಾಯ.
ಇದಕ್ಕೆ ಪೂರಕವಾಗಿ ಈಗ ಕಂಡುಬರುವ ಮಾಯಿಪ್ಪಾಡಿ ಅರಮನೆಗೆ ಕೇವಲ 220 ವರ್ಷಗಳ ಇತಿಹಾಸ ಮಾತ್ರವಿರುವುದನ್ನು
ಗಮನಿಸಬಹುದು.
'ಥಾಮಸ್ ಮನ್ರೋ' ಪ್ರಕಾರ ಕುಂಬ್ಳೆ ರಾಜ್ಯದಲ್ಲಿ 72 ಗ್ರಾಮಗಳು ಇದ್ದವು. (ಅವುಗಳು ಅಡೂರಿನಲ್ಲಿ 7ಗ್ರಾಮಗಳು, ಪೆರಡಾಲದಲ್ಲಿ
2, ಅಂಗಡಿಮೊಗರಿನಲ್ಲಿ 10, ವರ್ಕಾಡಿಯಲ್ಲಿ 2 ,ಕಾಸರಗೋಡಿನಲ್ಲಿ 2, ಮಂಜೇಶ್ವರದಲ್ಲಿ 32, ಕುಂಬಳೆಯಲ್ಲಿ 9, ಮೊಗ್ರಾಲ್ ನಲ್ಲಿ
8.) ಇವುಗಳನ್ನು ಜಿಲ್ಲೆ, ತಾಲೂಕು ಎಂಬುದಾಗಿ ವಿಂಗಡಣೆ ಮಾಡಿ ಕದಂಬ ವಂಶಸ್ಥರು ಹಾಗೂ ಅವರ ಸಂಬಂಧಿಕರು ಆಡಳಿತ
ನಡೆಸುತ್ತಿದ್ದರು.
ವಿಜಯನಗರ ಸಾಮ್ರಾಜ್ಯದ ಪತನಾನಂತರ ವಿಟ್ಲ ಸೇರಿದಂತೆ ಇಡೀ ತುಳುನಾಡು ಕೆಳದಿ ಅರಸರ ವಶವಾಯಿತು. ಕೆಳದಿಯ
ಅರಸ ವೆಂಕಟಪ್ಪನಾಯಕ (1586-1629) ನ ಆಡಳಿತಾವಧಿಯಲ್ಲಿ ತುಳುನಾಡಿನ ಎಲ್ಲಾ ಅರಸರನ್ನು ತನ್ನ ಸಾಮಂತರನ್ನಾಗಿ
ಮಾಡಿಕೊಂಡು ಕಪ್ಪವನ್ನು ಸಲ್ಲಿಸುವಂತೆ ಒತ್ತಡ ಹೇರಿದನು. ಆದರೆ ಕುಂಬಳೆ ಸೀಮೆಗೆ ಸಂಬಂಧಪಟ್ಟ ರಾಜವಂಶವು
ಸಂಘಟಿತರಾಗಿದ್ದುದರಿಂದ ಕೆಳದಿ ಅರಸರಿಗೆ ಕಪ್ಪ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಇದರಿಂದ ಕುಪಿತನಾದ ವೆಂಕಟಪ್ಪ
ನಾಯಕನು 1628 ರಲ್ಲಿ ಕಾಸರಗೋಡು ಬಲ್ಲಾಳರ ಮೇಲೆ ಯುದ್ಧ ಸಾರಿದನು. ಈ ಯುದ್ಧದಲ್ಲಿ ಸೋತ ಕೆಲವು ಬಲ್ಲಾಳರು
ತಿರುವಾಂಕೂರು ರಾಜನ ಬಳಿಗೆ ಹೋದರು. ಮತ್ತೆ ಕೆಲವರು ನಾಡಿನ ಬೇರೆಬೇರೆ ಕಡೆಗಳಿಗೆ ಹೋಗಿ ನೆಲೆಸಿದರು.
ವೆಂಕಟಪ್ಪನಾಯಕನು ಕ್ರಿಸ್ತ ಶಕ 1629 ರಲ್ಲಿ ಗತಿಸಿದ ಮೇಲೆ ತುಳುನಾಡಿನ ಅನೇಕ ಅರಸು ಮನೆತನಗಳು ಆತನ
ಉತ್ತರಾಧಿಕಾರಿ ವೀರಭದ್ರ ನಾಯಕನ ವಿರುದ್ಧವಾಗಿ ದಂಗೆಯೆದ್ದರು. "ಸ್ಥಳೀಯ ಅರಸರು ದಂಗೆ ಎದ್ದಾಗ ವಿಟ್ಲದ ಅರಸರು ಕೂಡ
ಪಾಲ್ಗೊಂಡಿದ್ದರು" ಎಂಬುದಾಗಿ ಡಾ| ಗುರುರಾಜ ಭಟ್ಟರು ಅಭಿಪ್ರಾಯಪಡುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಎರಡು ಪೋರ್ಚುಗೀಸ್
ದಾಖಲೆಗಳಿವೆ. ಅದರಲ್ಲಿ ಪ್ರಮುಖವಾದದ್ದು ಗೋವಾದಲ್ಲಿದ್ದ ಪೋರ್ಚುಗೀಸ್ ವೈಸರಾಯ್ ಗೆ ಎಲ್ ಡಿ ಸೋಜಾ ಡಿ ಮಿನೇಜಸ್
ಎಂಬವರು 16-01-1630 ರಲ್ಲಿ ಬರೆದಿದ್ದ ಕರಪತ್ರ. ಅದರಲ್ಲಿ "ತುಳುನಾಡಿನ ಅರಸರು ನಡೆಸಿದ ದಂಗೆಯಲ್ಲಿ ಪಾಲ್ಗೊಂಡಿದ್ದ
"ವಿಟ್ಲದ ಬಲ್ಲಾಳ" ಎಂದು ಸಂಬೋಧಿಸಿರುವುದನ್ನು ಕಾಣಬಹುದು. ಇದರಿಂದ ತಿಳಿಯುವುದೇನೆಂದರೆ ತುಳುನಾಡಿನ ಬಲ್ಲಾಳ
ಅರಸರು ಎದ್ದ ದಂಗೆಯಲ್ಲಿ ವಿಟ್ಲದ ಅರಸನೂ ಕೂಡ ಕೈಜೋಡಿಸಿದ್ದ ಎಂಬುದು. ಈಗಲೂ ಇಲ್ಲಿನ ಬಲ್ಲಾಳ ಮನೆತನದವರಿಗೆ ವಿಟ್ಲದ
ಅರಸು ಮನೆತನದೊಂದಿಗೆ ವೈವಾಹಿಕ ಸಂಬಂಧವಿರುವುದನ್ನು ಕಾಣಬಹುದು. ಆದರೂ ಆ ಕಾಲದಲ್ಲಿ ಕೆಳದಿ ನಾಯಕರ ಆಕ್ರಮಣ
ಗಳಿಂದ ಮುಕ್ತಿಯನ್ನು ಹೊಂದಲು ಸಾಧ್ಯವಾಗಲಿಲ್ಲ ಎಂಬುದು ತಿಳಿದು ಬರುತ್ತದೆ.
ಕ್ರಿಸ್ತಶಕ 1763ರಲ್ಲಿ ಕರ್ನಾಟಕದ ಕರಾವಳಿಯ ಮೇಲೆ ಹೈದರಾಲಿಯು ತನ್ನ ಅಧಿಕಾರವನ್ನು ಸ್ಥಾಪಿಸಿ ಕೊಡಬೇಕಾಗಿದ್ದ
ಕಪ್ಪಕಾಣಿಕೆಗಳ ಮೌಲ್ಯವನ್ನು ಹೆಚ್ಚಿಸಿ ಇಲ್ಲಿನ ರಾಜಕೀಯ ವ್ಯವಸ್ಥೆಯಲ್ಲಿ ಸ್ಥಿತ್ಯಂತರ ಉಂಟು ಮಾಡಿದನು. ಅವನು ನೇರವಾಗಿ
ಇಲ್ಲಿನ ಅರಮನೆಗಳ ಮೇಲೆ ದಾಳಿ ಮಾಡತೊಡಗಿದನು. ಆಗ ರಾಜ ಕುಟುಂಬಗಳು ಜೀವ ರಕ್ಷಣೆಯ ಭಯದಿಂದ ಬೇರೆ ಬೇರೆ
ಕಡೆಗಳಿಗೆ ಓಡಿಹೋಗಿ ನೆಲೆಸಬೇಕಾಯಿತು. ಇವನ ನಂತರ 1783ರ ಆಸುಪಾಸಿನಲ್ಲಿ ತುಳುನಾಡಿನ ಮೇಲೆ ಹೈದರಾಲಿಯ
ಮಗನಾದ ಟಿಪ್ಪು ಸುಲ್ತಾನನು ಆಕ್ರಮಣ ಮಾಡಿ ಬಲ್ಲಾಳವಂಶಸ್ಥರ ಅರಮನೆಗಳನ್ನೂ ಅದರ ಅಧೀನಕ್ಕೆ ಒಳಪಟ್ಟ
ದೇವಾಲಯಗಳನ್ನೂ ಧ್ವಂಸಮಾಡಿದನು. ಇದರಿಂದ ಭಯಭೀತರಾದ ಅರಸು ವಂಶಸ್ಥರು ತಾವಿದ್ದ ಅರಮನೆಗಳನ್ನು ಬಿಟ್ಟು ನಿರ್ಜನ
ಪ್ರದೇಶಗಳಲ್ಲಿ ಮತ್ತೆ 'ಬೀಡು'ಗಳನ್ನು ನಿರ್ಮಿಸಿ ವಾಸಿಸತೊಡಗಿದರೆಂಬುದಾಗಿ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.
ಆದ್ದರಿಂದಲೇ ಪ್ರಸ್ತುತ ಕಾಸರಗೋಡಿನ 'ಅಷ್ಟ ಬಲ್ಲಾಳ' ವಂಶದವರಿಗೆ ಕೆಲವು ಕಡೆಗಳಲ್ಲಿ ಬೀಡುಗಳೂ ಇನ್ನೂ ಕೆಲವು ಕಡೆಗಳಲ್ಲಿ
ಅರಮನೆಗಳೂ ಇರುವುದನ್ನು ಕಾಣಬಹುದು. ಇತ್ತೀಚೆಗೆ ಅರಮನೆಗಳು ಜೀರ್ಣಾವಸ್ಥೆಯನ್ನು ಹೊಂದಿದಾಗ ಮತ್ತೆ ಅಷ್ಟೊಂದು
ದೊಡ್ಡ ಅರಮನೆಗಳನ್ನು ನಿರ್ಮಿಸುವುದು ಸುಲಭದ ಕೆಲಸವಲ್ಲದ ಕಾರಣದಿಂದ ವಿಶಾಲವಾದ 'ಬೀಡು'ಗಳನ್ನು ತಾವೇ
ನಿರ್ಮಿಸಿಕೊಂಡಿರುವುದನ್ನು ಕಾಣಬಹುದಾಗಿದೆ.
1784 ರಲ್ಲಿ ಟಿಪ್ಪುಸುಲ್ತಾನನು ವಿಟ್ಲದ ಅರಸನಾದ ಅಚ್ಚುತ ಹೆಗ್ಗಡೆಯ ಶಿರಚ್ಛೇದನ ಮಾಡಿದ್ದಲ್ಲದೆ ವಿಟ್ಲದ ಅರಮನೆಯನ್ನೂ
ಸುಟ್ಟುಹಾಕಿದನು. ಇದರಿಂದಾಗಿ ದಿಕ್ಕು ಕಾಣದ ವಿಟ್ಲದ ಅರಸು ಮನೆತನದವರು ಹತ್ತಿರದ ಎರುಂಬು ಎಂಬ ಪ್ರದೇಶಕ್ಕೆ ಹೋಗಿ
ನೆಲೆಸಿದರು. 1799 ರಲ್ಲಿ ನಾಲ್ಕನೇ ಮೈಸೂರು ಯುದ್ಧದಲ್ಲಿ ಟಿಪ್ಪು ಕೊಲ್ಲಲ್ಪಟ್ಟ ನಂತರ ತುಳುನಾಡು ಬ್ರಿಟಿಷರ
ಆಡಳಿತಕ್ಕೊಳಪಟ್ಟಿತು. ಎಪ್ರಿಲ್16,1882 ರಲ್ಲಿ ಬೇಕಲ ತಾಲೂಕು ಆಗಿದ್ದ ಕಾಸರಗೋಡು ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿತು.
ಅದಾದ ಕೆಲ ವರ್ಷಗಳ ತರುವಾಯ ಕಾಸರಗೋಡು ತಾಲೂಕಿನ ರಚನೆಯಾಯಿತು. ಬ್ರಿಟಿಷರು ಕುಂಬಳೆ ರಾಜರನ್ನು ಹಾಗೂ
ಅವರ ರಾಜಕೀಯ ಸಂಬಂಧಿಕರನ್ನು ಬಂಧಿಸಿದರು. ಈ ಸಮಯದಲ್ಲಿ ಕುಂಬಳೆಯ ರಾಜ ಮನೆತನದ ಕೆಲವರು ಕೋಲತ್ತಿರಿ
ರಾಜನ ಸಹಾಯವನ್ನು ಪಡೆದುಕೊಂಡರು. ತದನಂತರ ಕೇರಳದ ಪ್ರತಿಷ್ಠಿತ ಮಲೆಯಾಳಿ ನಾಯರ್ ಮನೆತನ ದೊಂದಿಗೆ
ವೈವಾಹಿಕ ಸಂಬಂಧವನ್ನೂ ಬೆಳೆಸಿದರು. ಇವರು 1808 ರಿಂದ ಮಾಯಿಪ್ಪಾಡಿ ಯಲ್ಲಿ ಅರಮನೆಯನ್ನು ನಿರ್ಮಿಸಿ
ರಾಮಂತರಸುಗಳೆಂಬ ಕುಲನಾಮದಿಂದ ಪ್ರಖ್ಯಾತಿ ಪಡೆದರು. ಇದೇ ವಂಶದ ಕೆಲವರು ನಾಯರ್‌ಮನೆತನದ ಸಂಬಂಧವನ್ನು
ವಿರೋಧಿಸಿ ಬೇರೆಯಾಗಿ ಉಳಿದು ಬಿಟ್ಟರು. ಎಂಬುದಾಗಿ ಊಹಿಸಬಹುದು. ಆ ವಂಶಜರು ಕುಂಬಳೆಯಿಂದ ವಿಭಾಗಿಸಲ್ಪಟ್ಟಾಗ
ವಿಟ್ಲದ ಅರಸರೊಂದಿಗೆ ಸಂಬಂಧವನ್ನು ಬೆಳೆಸಿದರೆಂದು ಹೇಳಬಹುದಾಗಿದೆ. ಈ ಬಲ್ಲಾಳ ಮನೆತನದಲ್ಲಿ ಈಗಲೂ 'ಅಷ್ಟ
ಬಲ್ಲಾಳ'ರು ಎಂಬುದಾಗಿ 8 ಮನೆತನಗಳಿಂದ ಕೂಡಿದ ಬಲ್ಲಾಳ ವಂಶಸ್ಥರು ಇದ್ದಾರೆ. ಇದರಲ್ಲಿ ಕೆಲವು ವಂಶವು ನಶಿಸಿಹೋಗಿ
ಇನ್ನು ಕೆಲವು ಸಂತತಿಗಳು ಎರಡಾಗಿ ವಿಭಾಗಿಸಲ್ಪಟ್ಟಿದೆ. ಇದಕ್ಕೆ ಸಾಕ್ಷಿಯಾಗಿ ಈಗಲೂ ಕಾಸರಗೋಡಿನಲ್ಲಿ ಬಲ್ಲಾಳರ ಅಷ್ಟ
ಮನೆತನಗಳನ್ನು ಕಾಣಬಹುದಾಗಿದೆ. ಹಾಗೆಯೇ ಒಂದೊಂದು ಮನೆತನಕ್ಕೂ ಒಂದೊಂದು ಪ್ರತಿಷ್ಠಿತ ಮನೆತನದ
ತಂತ್ರಿಗಳು,ತಾಂತ್ರಿಕ ಕಾರ್ಯಗಳನ್ನು ನಡೆಸಲು ಹಾಗೂ ಧಾರ್ಮಿಕ ಸಲಹೆಗಳನ್ನು ನೀಡಲು ಇರುತ್ತಿದ್ದರು.
'ಕದಂಬ ಕೋರ್ಟ'ಗೆ ಪೂರಕವೆಂಬಂತೆ ಬಲ್ಲಾಳ ಮನೆತನಕ್ಕೆ ನಾಲ್ಕು ಸುತ್ತಿನ ಅರಮನೆ, ಊರಿನ‌ ನ್ಯಾಯ ತೀರ್ಮಾನಕ್ಕೆ
ಅರಮನೆಯ ಮುಂದೆ 'ಪಡಿಪ್ಪಿರೆ'ಗಳು ಇತ್ತು. ಇದರ ಕುರುಹುಗಳು ಇನ್ನೂ ಕೆಲವೆಡೆ ಜೀವಂತವಾಗಿ ಕಾಣಸಿಗುತ್ತವೆ. ಅದು
ಮಾತ್ರವಲ್ಲದೆ ಇವರ ಅಧೀನಕ್ಕೊಳಪಟ್ಟ ದೇವಾಲಯಗಳ ರಾಜಾಂಗಣದಲ್ಲಿ ನ್ಯಾಯ ತೀರ್ಮಾನಕ್ಕೆ 'ಪಟ್ಟದ ಕಲ್ಲು'
ಹಾಸಲಾಗುತ್ತಿತ್ತು. ಇದನ್ನೂ ಸಹ ಕೆಲವು ದೇವಾಲಯಗಳಲ್ಲಿ ಈಗಲೂ ಕಾಣಬಹುದಾಗಿದೆ.(ಕಾರಡ್ಕ ಬಲ್ಲಾಳರ ಆಡಳಿತ ಕ್ಕೊಳಪಟ್ಟ
ಮುಂಡೋಳು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಾಜಾಂಗಣದಲ್ಲಿ ಕಾಣಬಹುದಾಗಿದೆ) ಈ ಬಲ್ಲಾಳ ವಂಶಗಳಲ್ಲಿ ಒಂದು
ವಂಶವು ನಿರ್ವಂಶವಾದರೆ ಬೇರೊಂದು ವಂಶದ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಪಧ್ಧತಿಯಿತ್ತು ಎಂದು ತಿಳಿಯಲ್ಪಡುತ್ತದೆ.
ಆಡಳಿತ ವ್ಯವಸ್ಥೆ
ಕದಂಬರ ಕಾಲದಲ್ಲಿ ಆಡಳಿತ ನಡೆಯುತ್ತಿದ್ದಂತೆ ಅನಂತರದ ಹೊಯ್ಸಳರು, ವಿಜಯ ನಗರದ ಅರಸರು, ಇಕ್ಕೇರಿಯ ಅರಸರು
ಆಡಳಿತವನ್ನು ನಡೆಸಿದರೂ 'ಸೀಮೆ', 'ಮಾಗಣೆ'ಯ ವ್ಯವಸ್ಥೆಯು ಈ ಹಿಂದಿನಂತೆ ಮುಂದುವರಿಯುತ್ತಿತ್ತು ಎಂಬುದನ್ನು ಚರಿತ್ರೆಯ
ಪುಟಗಳಿಂದ ತಿಳಿಯಬಹುದು. ಸೀಮೆಯ ಉಪ ದೇವಾಲಯಗಳ ಹಾಗೂ ಇತರ ದೇವಾಲಯಗಳ ಆಡಳಿತವನ್ನು ಆ ಪ್ರದೇಶದ
ಬಲ್ಲಾಳ ವಂಶಸ್ಥರೇ ನೋಡಿಕೊಳ್ಳುತ್ತಿದ್ದರು ಎಂಬುದಾಗಿ ತಿಳಿದು ಬರುತ್ತದೆ. ಈಗಲೂ ಕೆಲವೊಂದು ದೇವಸ್ಥಾನಗಳಲ್ಲಿ ಇವರೇ
ಆನುವಂಶಿಕ ಮೊಕ್ತೇಸರರಾಗಿದ್ದಾರೆ. ಮತ್ತು ಕೆಲವೊಂದು ದೇವಾಲಯಗಳು ಗುತ್ತಿನವರು, ಬ್ರಾಹ್ಮಣರು ಮತ್ತು ಇತರ ಪಂಗಡಗಳ
ಅಧೀನದಲ್ಲಿದೆ. ಆದರೆ, ಕೆಲವೊಂದು ಕಡೆಗಳಲ್ಲಿ ಆಯಾ ಬಲ್ಲಾಳ ವಂಶದ ಹಿರಿಯರನ್ನು ಕರೆದು ರಾಜ ಮರ್ಯಾದೆಯನ್ನು ನೀಡಿ
ದೇವಾಲಯಗಳ ಕಾರ್ಯಕ್ರಮಗಳನ್ನು ನಡೆಸುವ ಪದ್ಧತಿ ಇತ್ತೀಚೆಗಿನವರೆಗೆ ಪ್ರಚಲಿತದಲ್ಲಿತ್ತು.(ಉದಾ: ಪಂಜ ಸದಾಶಿವ
ಪಂಚಲಿಂಗೇಶ್ವರ ದೇವರ ಜಾತ್ರೆಯ ಸಂದರ್ಭದಲ್ಲಿ ಕುಡಾಲು ಬೀಡಿನ ಕೇಮರ ಬಲ್ಲಾಳರನ್ನು ವಾದ್ಯ ಘೋಷಗಳೊಂದಿಗೆ
ಮೆರವಣಿಗೆಯ ಮೂಲಕ ಕೊಂಡುಹೋಗುವ ಪದ್ದತಿ ಇತ್ತು. ಹಾಗೆಯೆ ಪೈವಳಿಕೆ ಅರಮನೆಯ ಅರಸರನ್ನೂ ಸಹ
ವಾದ್ಯಘೋಷಗಳೊಂದಿಗೆ ಕಾರ್ಯಕ್ರಮಗಳಿಗೆ ಕರೆದೊಯ್ಯುವ ಪದ್ಧತಿ ಈಗಲೂ ಇದೆ.)
ಹದಿನೆಂಟನೆಯ ಶತಮಾನದ ನಂತರ ಆಡಳಿತ ವ್ಯವಸ್ಥೆಯಲ್ಲಾದ ಬದಲಾವಣೆಗಳು
18ನೆಯ ಶತಮಾನದ ತರುವಾಯ ತುಳುನಾಡಿನ ಆಡಳಿತ ವ್ಯವಸ್ಥೆಯಲ್ಲಿ ಧಾರ್ಮಿಕವಾಗಿ, ಸಾಮಾಜಿಕವಾಗಿ ಹಾಗು
ರಾಜಕೀಯವಾಗಿ ಕಾಲಕ್ಕೆ ತಕ್ಕಂತೆ ಬದಲಾವಣೆಗಳಾಗುತ್ತ್ತಾ ಹೋಯಿತು. ಇದಕ್ಕೆ ಪೂರಕವೆಂಬಂತೆ ಬಲ್ಲಾಳ ವಂಶಸ್ಥರ
ದೇವಸ್ಥಾನ, ದೈವಸ್ಥಾನ ಮತ್ತು ಅವರ ಸಾಮಾಜಿಕ ಹಾಗೂ ಆಡಳಿತಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳಲ್ಲಿ ಪ್ರತಿಯೊಂದು
ಪಂಗಡದ ಜನರೂ ಅವರವರ ಕುಲ ಕಸುಬುಗಳಿಗೆ ಹೊಂದಿಕೊಂಡು ಒಂದೊಂದು ಜವಾಬ್ಧಾರಿಗಳನ್ನು ನಿರ್ವಹಿಸುತ್ತಿದ್ದರು.
ಬ್ರಾಹ್ಮಣ ವರ್ಗವು ರಾಜಪುರೋಹಿತರಾಗಿಯೂ, ದೇವಸ್ಥಾನದ ಅರ್ಚಕರಾಗಿಯೂ, ಅಡಳಿತ ವ್ಯವಸ್ಥೆಯಲ್ಲಿ ಸಲಹೆಗಾರರಾಗಿಯೂ
ಕಾರ್ಯ ನಿರ್ವಹಿಸುತ್ತಿದ್ದರು. ಸೇನಾಧಿಪತಿ ಸ್ಥಾನವನ್ನು ಗುತ್ತಿನ ಬಂಟ ವರ್ಗದವರು ನಿರ್ವಹಿಸುತ್ತಿದ್ದರು. ಗುತ್ತು, ಭಾವ, ಬಾಳಿಕೆ,
ಪರಾರಿ ಇವು ನಾಲ್ಕು ಬಂಟ ಸಮಾಜದ ಗುರಿಕಾರ ಸ್ಥಾನಗಳು. ಈ ಸ್ಥಾನಮಾನಗಳು ಪರಂಪರಾನುಗತವಾಗಿದ್ದು ಅರಸನ
ದರ್ಬಾರಿನಲ್ಲಿ, ದೈವ ದೇವರುಗಳ ಉತ್ಸವಗಳಲ್ಲಿ ಸಾಮಾಜಿಕ ಸಮಾರಂಭಗಳಲ್ಲಿ, ನ್ಯಾಯ ಸಭೆಗಳಲ್ಲಿ ಇವರು ಉನ್ನತ
ಸ್ಥಾನವನ್ನು ಗಳಿಸಿದ್ದರು. ಈ ಗುರಿಕಾರರಿಗೆ 'ರಾಜ ಗುತ್ತಿನವರು' ಎಂಬ ಹೆಸರನ್ನು ನೀಡಿ ದಂಡನಾಯಕನ ಪಟ್ಟವನ್ನು
ನೀಡಲಾಗುತ್ತಿತ್ತು. ಸೀಮೆಗೆ ಅಥವಾ ಮಾಗಣೆಗೆ ಸಂಬಂಧಿಸಿದ ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಸಮಸ್ಯೆಗಳು ಅರಸರ
ದರ್ಬಾರಿನಲ್ಲಿ ಗುರಿಕಾರರೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನಕ್ಕೆ ಬರಲಾಗುತ್ತಿತ್ತು. ಸುವ್ಯವಸ್ಥಿತ ಜೀವನ, ಶಾಂತಿಪಾಲನೆ,
ದೈವ ದೇವಸ್ಥಾನಗಳಲ್ಲಿ ನಡೆಯಬೇಕಾದ ವಿನಿಯೋಗಗಳ ನಿರ್ವಹಣೆ ಕಂದಾಯ ವಸೂಲಿ, ಸೈನ್ಯದ ನಿರ್ವಹಣೆ ಮತ್ತು
ಸರಂಜಾಮುಗಳ ಒದಗಣೆ ಇವು ಗುರಿಕಾರರ ಹೊಣೆಯಾಗಿತ್ತು. ನ್ಯಾಯ ತೀರ್ಮಾನಗಳು ಅರಮನೆಯ 'ಪಡಿಪ್ಪಿರೆ' ಮತ್ತು
ದೇವಸ್ಥಾನಗಳಲ್ಲಿ ನಡೆಯುತ್ತಿತ್ತು. 'ಗುರಿಕಾರ' ಪದವಿಯ ಗುರುತಾಗಿ ಗುರಿಕಾರನಿಗೆ ಸೀಮೆಯ ಅರಸರ ವತಿಯಿಂದ ಬಂಗಾರದ
ಬಳೆಗಳನ್ನು ತೊಡಿಸಲಾಗುತ್ತಿತ್ತು . ಬಲ್ಲಾಳ ಅರಸರ ಪಟ್ಟಾಭಿಷೇಕದ ಸಂದರ್ಭದಲ್ಲಿ ಪಟ್ಟದ ಉಂಗುರದಲ್ಲಿ ಸೀಮೆಯ ದೇವರ
ಹೆಸರನ್ನು ಬರೆಯಲಾಗುತ್ತಿತ್ತು. ಸಾಂಪ್ರದಾಯಿಕ ವಿಧಿವಿಧಾನಗಳು ರಾಜಪುರೋಹಿತರ ಮೂಲಕ ನಡೆಯುವುದರೊಂದಿಗೆ ಆ
ಕಟ್ಟಲೆಗಳಲ್ಲಿ ಸೀಮೆಯ ಪ್ರತೀ ವರ್ಗದ ಜನರಿಗೂ ಪ್ರಧಾನ ಪಾತ್ರ ಇರುತ್ತಿತ್ತು. ಪಟ್ಟಾಭಿಷೇಕದ ಸಂದರ್ಭದಲ್ಲಿ ಪಟ್ಟದ ಪೀಠದಲ್ಲಿ
ಕುಳಿತುಕೊಳ್ಳಿಸುವ ಅಧಿಕಾರವನ್ನು ರಾಜ ಗುತ್ತಿನ ಗುರಿಕಾರನೂ, ಅರಸರ ಬೆರಳಿಗೆ ಉಂಗುರವನ್ನು ತೊಡಿಸುವ ಹಕ್ಕನ್ನು ಎರಡನೇ
ಗುರಿಕಾರನೂ, ಪಟ್ಟದ ಖಡ್ಗವನ್ನು ಒಪ್ಪಿಸುವ ಗೌರವವನ್ನು ಮೂರನೇ ಗುರಿಕಾರನೂ, ಪಟ್ಟದ ಹೊಸ ಹೆಸರನ್ನು ಹೇಳಿ ಮೂರು ಸಲ
ಕರೆಯುವ ಹಕ್ಕನ್ನು ನಾಲ್ಕನೆಯ ಗುರಿಕಾರನು ಹೊಂದಿದ್ದರು. "ಪಟ್ಟಾಭಿಷಿಕ್ತ" ಅರಸರು ರಾಜ ಮರ್ಯಾದೆಯ ಗುರುತುಗಳಾದ
'ಅಡ್ಡಪಲ್ಲಕ್ಕಿ', 'ಛತ್ರ ಚಾಮರ' ಹಾಗೂ 'ಹಗಲು ದೀವಟಿಗೆ'ಗಳನ್ನು ಉಪಯೋಗಿಸಲು ಅರ್ಹರಾಗಿದ್ದರು. ಇವರು ಸಾಮಂತ
ಅರಸರಾದರೂ ಸ್ವತಂತ್ರ ರಾಜ್ಯಭಾರದ ಅಧಿಕಾರವಿತ್ತು .ಆದರೆ ಸಾಮ್ರಾಟನಿಗೆ ನಿಯಮದಂತೆ ಕಂದಾಯವನ್ನು ಕ್ಲಪ್ತ ಸಮಯಕ್ಕೆ
ಸಂದಾಯ ಮಾಡುವರೇ ಮತ್ತು ಅವರ ಆಜ್ಞೆಗಳನ್ನು ಪಾಲಿಸಲು ಬದ್ಧರಾಗಿದ್ದರು.
[ಇದು ಸಂಶೋಧನಾ ದೃಷ್ಟಿಯಿಂದ ಸಂಗ್ರಹಿಸಿರುವ ಮಾಹಿತಿಗಳಾದುದರಿಂದ ಕೃತಿ ಚೌರ್ಯ ಮಾಡುವುದು ಶಿಕ್ಷಾರ್ಹ
ಅಪರಾಧವಾಗುತ್ತದೆ. ಕೃತಿ ಚೌರ್ಯ ಮಾಡಿದುದು ಕಂಡುಬಂದಲ್ಲಿ ಅಂತಹ ವ್ಯಕ್ತಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ
ಕೈಗೊಳ್ಳಲಾಗುವುದು.]

Contenu connexe

Tendances

Common Breeds of Swine/Pigs
Common Breeds of Swine/PigsCommon Breeds of Swine/Pigs
Common Breeds of Swine/PigsSudhanBhusal
 
Urethral catheterization in animals
Urethral catheterization in animalsUrethral catheterization in animals
Urethral catheterization in animalsShahbazZafar4
 
Non conventional feed resources
Non conventional feed resourcesNon conventional feed resources
Non conventional feed resourcesafnanzaib
 
different sites for taking pulse and respiration in sheep
different sites for taking pulse and respiration in sheepdifferent sites for taking pulse and respiration in sheep
different sites for taking pulse and respiration in sheepMutahirRehman
 
Equine breeding & reproduction
Equine  breeding & reproductionEquine  breeding & reproduction
Equine breeding & reproductionHimanshu Pandey
 
types of horse shoes
types of horse shoestypes of horse shoes
types of horse shoesskuast-jammu
 
Conformation faults of fore limbs & hind limbs in horses
Conformation faults of fore limbs & hind limbs in horsesConformation faults of fore limbs & hind limbs in horses
Conformation faults of fore limbs & hind limbs in horsesALI AFSAR
 
HANDLING OFLIQUID FEEDINGREDIENTS IN ANIMAL NUTRITION
HANDLING OFLIQUID FEEDINGREDIENTS IN ANIMAL NUTRITIONHANDLING OFLIQUID FEEDINGREDIENTS IN ANIMAL NUTRITION
HANDLING OFLIQUID FEEDINGREDIENTS IN ANIMAL NUTRITIONnuti eshwar
 
identification of feed stuffs and feed formulation
identification of feed stuffs and feed formulationidentification of feed stuffs and feed formulation
identification of feed stuffs and feed formulationchiremy tipdas
 
Equine nutrition
Equine nutritionEquine nutrition
Equine nutritionUCV&AS IUB
 
Female Reproductive Tract Anatomy of Domestic Animals
Female Reproductive Tract Anatomy of Domestic AnimalsFemale Reproductive Tract Anatomy of Domestic Animals
Female Reproductive Tract Anatomy of Domestic AnimalsGarry D. Lasaga
 

Tendances (20)

Common Breeds of Swine/Pigs
Common Breeds of Swine/PigsCommon Breeds of Swine/Pigs
Common Breeds of Swine/Pigs
 
Urethral catheterization in animals
Urethral catheterization in animalsUrethral catheterization in animals
Urethral catheterization in animals
 
Fodder management for dairy farms
Fodder  management for dairy farmsFodder  management for dairy farms
Fodder management for dairy farms
 
Non conventional feed resources
Non conventional feed resourcesNon conventional feed resources
Non conventional feed resources
 
different sites for taking pulse and respiration in sheep
different sites for taking pulse and respiration in sheepdifferent sites for taking pulse and respiration in sheep
different sites for taking pulse and respiration in sheep
 
Equine breeding & reproduction
Equine  breeding & reproductionEquine  breeding & reproduction
Equine breeding & reproduction
 
Vagus indigestion
Vagus indigestionVagus indigestion
Vagus indigestion
 
Ration formulation
Ration formulationRation formulation
Ration formulation
 
Ostrich Farming
Ostrich FarmingOstrich Farming
Ostrich Farming
 
Urea molasses block
Urea molasses blockUrea molasses block
Urea molasses block
 
Fluid therapy_Animals
Fluid therapy_AnimalsFluid therapy_Animals
Fluid therapy_Animals
 
types of horse shoes
types of horse shoestypes of horse shoes
types of horse shoes
 
Restraining of Dog
Restraining of DogRestraining of Dog
Restraining of Dog
 
Conformation faults of fore limbs & hind limbs in horses
Conformation faults of fore limbs & hind limbs in horsesConformation faults of fore limbs & hind limbs in horses
Conformation faults of fore limbs & hind limbs in horses
 
Amputation
AmputationAmputation
Amputation
 
HANDLING OFLIQUID FEEDINGREDIENTS IN ANIMAL NUTRITION
HANDLING OFLIQUID FEEDINGREDIENTS IN ANIMAL NUTRITIONHANDLING OFLIQUID FEEDINGREDIENTS IN ANIMAL NUTRITION
HANDLING OFLIQUID FEEDINGREDIENTS IN ANIMAL NUTRITION
 
identification of feed stuffs and feed formulation
identification of feed stuffs and feed formulationidentification of feed stuffs and feed formulation
identification of feed stuffs and feed formulation
 
Egg formation process in chicken
Egg formation process in chickenEgg formation process in chicken
Egg formation process in chicken
 
Equine nutrition
Equine nutritionEquine nutrition
Equine nutrition
 
Female Reproductive Tract Anatomy of Domestic Animals
Female Reproductive Tract Anatomy of Domestic AnimalsFemale Reproductive Tract Anatomy of Domestic Animals
Female Reproductive Tract Anatomy of Domestic Animals
 

Kasaragod ballal

  • 1. ಕಾಸರಗೋಡಿನ ಹಿಂದೂ ಸಾಮಂತ ಅರಸು ಬಲ್ಲಾಳರು ಭಾರತದ ಪಶ್ಚಿಮದ ಅರಬ್ಬೀ ಕಡಲಿನ ಕಿನಾರೆಯು ಪರಶುರಾಮ ಸೃಷ್ಟಿಯ 'ನಾಗಲೋಕ' ವೆಂದು ಪುರಾಣಗಳಲ್ಲಿ ಗುರುತಿಸಲ್ಪಟ್ಟಿದೆ. ಉತ್ತರದ ಗೋಕರ್ಣದಿಂದ ಆರಂಭಿಸಿ ದಕ್ಷಿಣದಲ್ಲಿ ನೀಲೇಶ್ವರದ ವರೆಗೆ ವಿಸ್ತಾರವಾಗಿ ಹಬ್ಬಿದ ಈ ಪ್ರದೇಶವು ಪುರಾತನ ಕಾಲದಿಂದಲೂ "ತೌಳವನಾಡು" ಅಥವಾ "ತುಳುನಾಡು" ಎಂದು ಪ್ರಸಿದ್ದಿ ಪಡೆದಿದೆ. ಭೂಮಾತೆ ಹಸಿರು ಸೀರೆಯನ್ನುಟ್ಟು ಹಚ್ಚ ಹಸುರಾಗಿ ಕಂಗೊಳಿಸುತ್ತ, ನೋಡುಗರ ಕಣ್ಣಿಗೆ ಹಬ್ಬವನ್ನುಂಟುಮಾಡುವ ಈ ಸುಂದರ ಪ್ರಕೃತಿ ರಮಣೀಯ ಪ್ರದೇಶವು ಅನೇಕ ರಾಜವಂಶಗಳ, ಪಾಳೆಯಗಾರರ ಆಡಳಿತವನ್ನು ಕಂಡಿದೆ. ಈ ನಾಡು ಉತ್ತಮ ಋತುಮಾನ ಹಾಗೂ ಸಕಲ ನೈಸರ್ಗಿಕ ಸಂಪನ್ಮೂಲಗಳಿಂದೊಡಗೂಡಿದ "ಭೂ ಸ್ವರ್ಗ" ವೆಂದರೂ ತಪ್ಪಾಗಲಾರದು. ಈ ತುಳುನಾಡಿನ ರಾಜಕೀಯ ಇತಿಹಾಸ ಬಹಳ ಪುರಾತನವಾದುದು. ಚಂದ್ರಗಿರಿ ನದಿಯ ಉತ್ತರ ಮತ್ತು ನೇತ್ರಾವತಿ ನದಿಯ ದಕ್ಷಿಣ ಭಾಗ ಹಾಗು ಪೂರ್ವ ಘಟ್ಟದಿಂದ ಪಶ್ಚಿಮದ ಕಡಲಿನ ತನಕವಿರುವ ಭೂಭಾಗ ತೌಳವ ಮಾತೆಯ ಶಿರೋ ಭೂಷಣದಂತೆ ಶೋಭಿಸುವ' ಕಾಸರಗೋಡು'. ಇಲ್ಲಿ ಅನೇಕ ರಾಜ ವಂಶಗಳು ಆಳ್ವಿಕೆ ಮಾಡಿದ್ದಾರೆ. ಆರಂಭದಲ್ಲಿ ರಾಜ್ಯಗಳೆಂದು ನಂತರದ ಕಾಲಘಟ್ಟದಲ್ಲಿ ಸೀಮೆಗಳೆಂದು ವಿಭಾಗೀಕರಿಸಲಾಗಿತ್ತು. ಮದ್ರಾಸು ರಾಜ್ಯವು ಅಸ್ತಿತ್ವದಲ್ಲಿದ್ದಾಗ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿದ್ದ, ಹಾಗೂ ಇತ್ತೀಚೆಗೆ ಕೇರಳ ರಾಜ್ಯಕ್ಕೆ ಸೇರಿಹೋದ ಕಾಸರಗೋಡು ತೌಳವ ನಾಡಿನ ಭಾಗವೇ ಆಗಿದೆ. ಇದರ ವಿಸ್ತೀರ್ಣತೆ ಮಂಜೇಶ್ವರದಿಂದ ನೀಲೇಶ್ವರದವರೆಗೂ ಹಬ್ಬಿದೆ. ಬ್ರಿಟಿಷರ ಆಳ್ವಿಕೆಯ ನಂತರ ರೂಪುಗೊಂಡ ಮದ್ರಾಸು ರಾಜ್ಯ ಅಂದರೆ, 1639 ರ ಮೊದಲಿನ ಆಡಳಿತ ಹಾಗೂ ನಂತರ ಈ ಭಾಗದಲ್ಲಿ ಕದಂಬ ಮೂಲದ ಅರಸು ಬಲ್ಲಾಳರ ಆಡಳಿತವಿತ್ತು. ಅಲ್ಲದೆ ಪಲ್ಲವರು, ಚೋಳರು, ಅಳುಪರು ಕದಂಬರು, ವಿಜಯನಗರದ ಅರಸರು, ಇಕ್ಕೇರಿಯ ನಾಯಕರು, ಮೈಸೂರಿನ ಹೈದರಾಲಿ, ಟಿಪ್ಪು ಸುಲ್ತಾನ್, ಆಮೇಲೆ ಬ್ರಿಟಿಷರು ಕೂಡ ಈ ಭೂಭಾಗದ ಮೇಲೆ ಅಧಿಪತ್ಯ ಸ್ಥಾಪಿಸಿದ್ದರು.1947 ರ ಸ್ವಾತಂತ್ರ್ಯಾನಂತರ ಭಾಷಾವಾರು ಪ್ರಾಂತ್ಯ ವಿಂಗಡೆಣೆಯಯಾದ ಪರಿಣಾಮವಾಗಿ ದಕ್ಷಿಣ ಕನ್ನಡದ ಭಾಗವಾಗಿದ್ದ ಕಾಸರಗೋಡು ಕೇರಳದ ಪಾಲಾಗುವ ಮೂಲಕ ತುಳುನಾಡಿನ ಮುಕುಟಮಣಿ ಕಳಚಿಹೋಯಿತು. ತು(ಲು)ಳುನಾಡಿನ ಹಿಂದೂ ಸಾಮಂತ ಅರಸು ಬಲ್ಲಾಳರ ಹಿನ್ನಲೆ ತುಳುನಾಡಿನ ಬಗ್ಗೆ ಅನೇಕ ಇತಿಹಾಸಕಾರರು, ಪ್ರವಾಸಿಗರು, ವಿದ್ವಾಂಸರು ಆಯಾ ಕಾಲಘಟ್ಟದಲ್ಲಿ ತಮಗೆ ದೊರೆತಿರುವ ಕೆಲವು ಮೂಲಾಧಾರಗಳನ್ನು ಅಧ್ಯಯನ ಮಾಡಿ, ಕೆಲವೊಂದು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಆದರೆ, ನಿಖರವಾದ ಮತ್ತು ಹೆಚ್ಚಿನ ಆಧಾರಗಳ ಅಭಾವದಿಂದ ತುಳುನಾಡಿನ ಭಾಗವಾದ ಕಾಸರಗೋಡನ್ನು ಅಂದರೆ 'ಕುಂಬಳೆ ಸೀಮೆ'ಯನ್ನು ಆಳಿದ 'ಹಿಂದೂ ಸಾಮಂತ ಅರಸು ಬಲ್ಲಾಳ'ರ ಕುರಿತು ಸಂಶೋಧನೆಗಳು ನಡೆದುದು ವಿರಳಾತಿವಿರಳವೆಂದೇ ಹೇಳಬಹುದು. ಶ್ರೀ ಗಣಪತಿ ರಾವ್ ಐಗಳು ಪ್ರಕಟಿಸಿದ "ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ", ಡಾ. ಗುರುರಾಜ ಭಟ್ಟರ "ಸ್ಟಡೀಸ್ ಇನ್ ತುಳುವ ಹಿಸ್ಟರಿ ಆಂಡ್ ಕಲ್ಚರ್", ಮತ್ತು ಕೇಶವ ಕೃಷ್ಣ ಕುದ್ವ, ಡಾ.ಕೆ.ಜಿ. ವಸಂತಮಾಧವ, ಡಾ.ಉಪ್ಪಂಗಳ ರಾಮಭಟ್ಟ, ಬಿ.ಎ. ಸಾಲೆತ್ತೂರು, ಡಾ. ಕೆ.ವಿ ರಮೇಶ್, ಸದಾನಂದ ನಾಯಕ, ಡಾ.ಚನ್ನಕ್ಕ ಪಾವಟೆ, ಹೇರಂಜೆ ಕೃಷ್ಣ ಭಟ್ಟ, ಎಸ್. ಡಿ. ಶೆಟ್ಟಿ, ಯನ್. ಎ. ಸೀನಪ್ಪ ಹೆಗಡೆ ಮೊದಲಾದವರೆಲ್ಲ ಸಂಶೋಧನೆ ಮಾಡಿ ತುಳುನಾಡಿನ ಬೇರೆಬೇರೆ ಕಡೆಗಳಲ್ಲಿರುವ ರಾಜವಂಶಗಳ ತೌಲನಿಕ ಅದ್ಯಯನ ಮಾಡಿ 'ತುಳುನಾಡಿನ ಅರಸುಮನೆತನ'ಗಳ ಕುರಿತಾಗಿ ಬರೆದಿರುವ ಕೆಲವು ವಿಚಾರಗಳನ್ನು ಅವರ ಸಂಶೋಧನಾ ಗ್ರಂಥಗಳಿಂದ ತಿಳಿಯಬಹುದಾಗಿದೆ. ಇವರಲ್ಲಿ ಕೆಲವು ಇತಿಹಾಸಕಾರರು ಕಾಸರಗೋಡಿನ 'ಬಲ್ಲಾಳ ವಂಶ' ಹಾಗೂ ತುಳುನಾಡಿನ ಇತರ 'ಬಲ್ಲಾಳ ವಂಶ'ಗಳ ಕುರಿತಾಗಿ ಉಲ್ಲೇಖಿಸಿರುವ ವಿಚಾರಗಳನ್ನು ಗಮನಿಸಿದಾಗ 'ಕಾಸರಗೋಡಿನ ಬಲ್ಲಾಳ' ವಂಶವು ಇತರ 'ಬಲ್ಲಾಳ' ವಂಶಕ್ಕಿಂತ ಭಿನ್ನವಾಗಿದ್ದು ಇವರು 'ಜೈನ ಬಲ್ಲಾಳ'ರಲ್ಲ ಜೈನೇತರರಾಗಿದ್ದಾರೆ. ಎಂಬುದು ಸ್ಪಷ್ಟ. ಇದು ಗಣಪತಿ ರಾವ್ ಐಗಳ "ದಕ್ಷಿಣ ಕನ್ನಡದ ಪ್ರಾಚೀನ ಇತಿಹಾಸ" ಕೃತಿಯಲ್ಲಿ ಉಲ್ಲೇಖಿಸಲ್ಪಟ್ಟಿದೆ. ಈ ವಂಶದ ಅರಮನೆಗಳು, ಬೀಡುಗಳು ಅತ್ತ ದಕ್ಷಿಣದ ಚಂದ್ರಗಿರಿಯಿಂದ ತೊಡಗಿ ಇತ್ತ ಉತ್ತರದ ಮಂಜೇಶ್ವರದವರೆಗೂ ಅಲ್ಲಲ್ಲಿ ಕಾಣಸಿಗುತ್ತವೆ. ಕೆಲವು ಇತಿಹಾಸಕಾರರು ಈ ವಂಶವನ್ನು 'ಜೈನ'ರೆಂದು ಹೇಳಿದ್ದಾರೆ. ವಾಸ್ತವದಲ್ಲಿ ಇವರು ಜೈನೇತರರಾಗಿದ್ದು ವೈಷ್ಣವ ಮತಾವಲಂಬಿಗಳಾಗಿದ್ದಾರೆ. ವಿಷ್ಣು, ದುರ್ಗೆ, ಗಣಪತಿ, ಶಾಸ್ತಾವು, ಸುಬ್ರಹ್ಮಣ್ಯ ಈ ವಂಶದ ಪ್ರಧಾನ ಆರಾಧನಾ ಶಕ್ತಿಗಳಾಗಿವೆ.
  • 2. ಸಾಮಾನ್ಯವಾಗಿ 'ಜೈನ ಬಲ್ಲಾಳ'ರ ಆಳ್ವಿಕೆಯಿದ್ದ ಪ್ರದೇಶಗಳಲ್ಲಿ ಅವರ ಧಾರ್ಮಿಕ ಕೇಂದ್ರಗಳಾದ ಬಸದಿಗಳು, ಕಂಬಗಳು ಹಾಗೂ ಇತರ ಸಾಂಸ್ಕೃತಿಕ ಕುರುಹುಗಳು ಕಾಣಸಿಗುತ್ತವೆ. ಆದರೆ, ಕಾಸರಗೋಡಿನ 'ಬಲ್ಲಾಳ' ವಂಶ ಹಾಗೂ ಅವರು ಸಾಗಿಬಂದ ದಾರಿ, ಧರ್ಮ, ಸಂಸ್ಕೃತಿ, ಆಚಾರ, ವಿಚಾರ, ನಂಬಿಕೆಗಳೆಲ್ಲವೂ ತುಳುನಾಡಿನಲ್ಲಿ ಈ ಹಿಂದಿನಿಂದಲೇ ವಾಸವಾಗಿದ್ದ ಜನರಿಂದ ವಿಭಿನ್ನವಾಗಿದೆ. ನೂರಾರು ವರ್ಷಗಳ ಹಿಂದೆ ಈ ಬಲ್ಲಾಳ ವಂಶದ ಜನಸಂಖ್ಯೆ ಅಧಿಕವಿದ್ದರೂ ಪ್ರಸ್ತುತ ಕೇವಲ ಸಾವಿರದಷ್ಟು ಮಾತ್ರ ಸದಸ್ಯರನ್ನು ಹೊಂದಿರುವ ಅಲ್ಪಸಂಖ್ಯಾತರಾಗಿರುವರು. ಕುಂಬಳೆ ಸೀಮೆಯನ್ನಾಳಿದ ಅರಸು ವಂಶಸ್ಥರ ಪರಂಪರೆಯ ಕೊಂಡಿಗಳಾದ ಈ ಬಲ್ಲಾಳರು ಸಾಧಾರಣ 1200 ವರ್ಷಗಳ ಇತಿಹಾಸವನ್ನು ಹೊಂದಿರುವರೆಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಪ್ರಾಚೀನ ಕಾಲದಿಂದ ಇತ್ತೀಚೆಗಿನವರೆಗೆ ಜೈನ ಬಲ್ಲಾಳರು ಹಾಗೂ ಕಾಸರಗೋಡಿನ ಬಲ್ಲಾಳ ವಂಶಗಳು ಮಾತ್ರವೇ 'ಬಲ್ಲಾಳ' ಎನ್ನುವ ಕುಲನಾಮದಿಂದ ಗುರುತಿಸಲ್ಪಡುತ್ತಿತ್ತು . ಆದರೆ ಈ ವಂಶಗಳು ಕೆಲವೊಂದು ಕಡೆಗಳಲ್ಲಿ ನಶಿಸಿಹೋದ ಅನಂತರ ಇವರ ಸೈನಿಕರಾಗಿದ್ದ, ಅಥವಾ 'ಬಂಟ'ರಾಗಿದ್ದ ( ಬಂಟ= ಎಂದರೆ ಸೈನಿಕ ಎಂದರ್ಥ) ' ಬಂಟ ಸಮುದಾಯವು ಬೀಡು, ಅರಮನೆಗಳನ್ನು ಪುನರುಜ್ಜೀವನಗೊಳಿಸಿ 'ಬಲ್ಲಾಳ' ಕುಲ ನಾಮವನ್ನು ಇರಿಸಿಕೊಂಡಿರುವುದರಿಂದ ಇವರು ಇತಿಹಾಸದ ಪುಟಗಳಲ್ಲಿ 'ಬಂಟ ಬಲ್ಲಾಳ' ರೆಂಬ ಕುಲನಾಮದಿಂದ ಗುರುತಿಸಿಕೊಂಡರು. ಆದ್ದರಿಂದ ಇತ್ತೀಚೆಗಿನ ಇತಿಹಾಸಗಾರರು 'ಜೈನಬಲ್ಲಾಳ'ರನ್ನುಳಿದು ತುಳುನಾಡಿನಲ್ಲಿ 'ಬಂಟಬಲ್ಲಾಳ'ರು ಮಾತ್ರ ಇರುವುದೆಂಬ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಶತಶತಮಾನದಿಂದಲೇ ತುಳುನಾಡಿನಲ್ಲಿ ಜೈನರಿದ್ದರೂ ಹೊಯ್ಸಳರ ತರುವಾಯ 'ಬಲ್ಲಾಳ' ಎಂಬ ಕುಲನಾಮವು ಪ್ರಚಲಿತವಾಗಿ ಕಂಡುಬರುತ್ತದೆ ಎಂಬುದಾಗಿ ಇತಿಹಾಸದ ಆಳವಾದ ಅಧ್ಯಯನದ ನಂತರ ತಿಳಿಯಲು ಸಾದ್ಯ. ಬಂಟ ಸಮುದಾಯವು ಹಿಂದಿನಿಂದಲೇ ತುಳುನಾಡಿನಲ್ಲಿ 'ನಾಗ ವಂಶಜ'ರೆಂದು ಕರೆಯಲ್ಪಡುತ್ತಿದ್ದರು. ಅನಂತರ ಈ ತುಳುನಾಡನ್ನು ಆಳಿದ ಎಲ್ಲ ರಾಜವಂಶಸ್ಥರ ಸೇನಾನಿಗಳಾಗಿ ಮೆರೆದರು. ಆದ್ದರಿಂದ ಅಳುಪ ಅರಸರು, ಕದಂಬರು, ವಿಜಯನಗರದ ಅರಸರು ತುಳುನಾಡನ್ನು ಆಳ್ವಿಕೆ ಮಾಡುವಾಗಲೂ ಇವರೇ ಅವರ ಸೇನಾನಿಗಳಾಗಿದ್ದರು. ಅಳುಪ ಅರಸರು ನಾಗವಂಶಸ್ಥರ ಸಂಬಂಧವನ್ನು ಬೆಳೆಸಿದ ಮೇಲೆ ಈ ನಾಗ ವಂಶಜರು 'ಬಂಟ' ಯಾ ಅಳುಪರು(ಆಳ್ವರು) ಎಂಬ ಕುಲನಾಮದಿಂದ ಕರೆಯಲ್ಪಟ್ಟರು. ಇದರ ಹೊರತಾಗಿ ಕಾಸರಗೋಡಿನಲ್ಲಿರುವ ಬಲ್ಲಾಳ ವಂಶವನ್ನು, ಈ ನಾಗ ವಂಶಜರಿಗೆ ಹೋಲಿಸಿ ಅವೆರಡು ಒಂದೇ ಅಥವಾ ಇವರು 'ಬಂಟ ಬಲ್ಲಾಳ'ರೆಂಬುದಾಗಿ ಊಹಿಸಿ ವ್ಯಾಖ್ಯಾನಿಸಿದ್ದು ಸತ್ಯಕ್ಕೆ ದೂರವಾದ ವಿಚಾರ. ಯಾಕೆಂದರೆ ಈ ಅಭಿಪ್ರಾಯಕ್ಕೆ ಪೂರಕವಾಗಿ 'ಕೈಯಾರ ಕಿಞ್ಞಣ್ಣ ರೈ'ಗಳು ತಮ್ಮ ಲೇಖನದಲ್ಲಿ 'ಬಲ್ಲಾಳ'ರು ಅಳಿದು ಹೋದ ಬೀಡುಗಳಲ್ಲಿ ಬಂಟರು ಅಧಿಕಾರವನ್ನು ಸ್ಥಾಪಿಸಿ 'ಬಂಟ ಬಲ್ಲಾಳ' ರೆಂದು ಕರೆಸಿಕೊಂಡರು ಎಂದು ಹೇಳಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಈ 'ಬಲ್ಲಾಳ' ವಂಶದ ಇತಿಹಾಸವನ್ನು ಅಧ್ಯಯನದ ದೃಷ್ಟಿಯಿಂದ ಮೂರು ವಿಭಾಗಗಳಾಗಿ ವಿಂಗಡಿಸಬಹುದು. ೧)ಪ್ರಾಚೀನ ಕಾಲಘಟ್ಟ, ೨) ಮಧ್ಯಾವಧಿ ಕಾಲಘಟ್ಟ, ಹಾಗೂ ೩) ಆಧುನಿಕ ಕಾಲಘಟ್ಟ ಎಂಬುದಾಗಿ. ಡಾ.ರಾಮ ಭಟ್, ಹೇರಂಜೆ ಕೃಷ್ಣಭಟ್, ಹಾಗು ಗುರುರಾಜ ಭಟ್ ಮೊದಲಾದ ಸಂಶೋಧಕರಿಗೆ ಮೂಲಾಧಾರಗಳ ಕೊರತೆಯಿಂದಾಗಿ ಮೇಲಿಂದ ಮೇಲೆ ಈ ವಿಚಾರವನ್ನು ಕುರಿತು ಬರೆಯಲು ಸಾದ್ಯವಾಗಿದೆಯೇ ಹೊರತು ಆಳವಾದ ಸಂಶೋಧನೆ ನಡೆಸಲಾಗಲಿಲ್ಲ. ಇದಕ್ಕೆ ಇನ್ನೊಂದು ಕಾರಣ ಕಾಸರಗೋಡಿನ ಬಲ್ಲಾಳ ವಂಶವು ಶತಮಾನಗಳಿಂದಲೇ ಜೀವಂತವಾಗಿರುವುದೂ ಆಗಿರಬಹುದು. ಇತಿಹಾಸಕಾರರಾದ ಗಣಪತಿ ಐಗಳು ತನ್ನ ಸಂಶೋಧನಾ ಗ್ರಂಥದಲ್ಲಿ 'ಕಾಸರಗೋಡಿನ ಈ ಬಲ್ಲಾಳ ವಂಶವು ಜೈನೇತರರೆಂದೂ ಹಾಗು ಮತ್ತೊಬ್ಬ ಹಿರಿಯ ಸಂಶೋದಕ ಡಾ! ರಾಮಭಟ್ಟರು ಇವರು(ಬಲ್ಲಾಳರು) ಕದಂಬ ವಂಶದವರಾಗಿರಲೂಬಹುದು. ಏಕೆಂದರೆ 12ನೇ ಶತಮಾನದ ತರುವಾಯ ಹೊಯ್ಸಳರ ಪ್ರಭಾವದಿಂದ 'ಬಲ್ಲಾಳ' ಕುಲ ನಾಮವನ್ನು ಇರಿಸಿಕೊಂಡಿರಬಹುದೆಂದು ಹೇಳಿದ್ದಾರೆ'. ಈ ನಿಟ್ಟಿನಲ್ಲಿ ಈ ವಂಶದ ಕೆಲವೊಂದು ಹಿರಿಯರನ್ನು ಹಾಗು ಅರಸರನ್ನು ಸಂದರ್ಶನ ನಡೆಸಿದಾಗ ಮೇಲಿನ ಸಂಶೋಧಕರು ನೀಡಿದ ಮಾಹಿತಿಯಲ್ಲಿ ಸತ್ಯಾಂಶವಿರುವುದು ಕಂಡುಬರುತ್ತದೆ. ಇದಕ್ಕೂ ಮೊದಲು ಕಾಸರಗೋಡಿನ ನಿವೃತ್ತ ಜಿಲ್ಲಾಧಿಕಾರಿ ಹಾಗು ಲೇಖಕರಾದ ದಿ.ಲಕ್ಷ್ಮಣ ಬಲ್ಲಾಳರು ಬರೆದ "ಹಿಂದೂ ಸಾಮಂತ ಅರಸರು ಹಾಗೂ ತುಳುನಾಡು" ಎಂಬ ತನ್ನ ಲೇಖನದಲ್ಲಿ ಈ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ನೀಡಿದ್ದಾರೆ. ಅದೇ ರೀತಿ ಹಿರಿಯ ಕವಿಗಳೂ, ಸಂಶೋಧಕರೂ ಆದ ದಿವಂಗತ ಮರಿಯಯ್ಯ ಬಲ್ಲಾಳರು ಹಲವಾರು ಸಂಶೋಧಕರೊಂದಿಗೆ ಚರ್ಚಿಸಿ ಈ ಜೈನೇತರ ಅರಸು ಬಲ್ಲಾಳರ ಇತಿಹಾಸದ ಬಗ್ಗೆ ಹಲವಾರು ಮಾಹಿತಿಗಳನ್ನು ಒದಗಿಸಿ ಕೊಟ್ಟಿದ್ದಾರೆ. ಅಲ್ಲದೆ, ಸ್ಥಳಪುರಾಣ, ಐತಿಹ್ಯ ಹಾಗೂ ಕೆಲವು ಮಹಾತ್ಮೆಗಳಿಂದಲೂ ಲಭಿಸುವಂತಹ ಮಾಹಿತಿಗಳಿಂದ ಕಾಸರಗೋಡಿನ "ಹಿಂದೂ ಸಾಮಂತರಸು ಬಲ್ಲಾಳ"ರ ಬಗೆಗಿನ ಇತಿಹಾಸವನ್ನು ತಿಳಿಯಬಹುದಾಗಿದೆ. . ಪ್ರಾಚೀನ ಇತಿಹಾಸ ಗ್ರಾಮ ಪದ್ಧತಿಯ ಎರಡನೇ ಭಾಗದಲ್ಲಿ ತುಳುನಾಡಿನಲ್ಲಿ ಕದಂಬ ರಾಜ ಮಯೂರ ವರ್ಮನು ಋಷಿ ಮುನಿಗಳ ಉಪದೇಶದಂತೆ ಅಹಿಛ್ಛತ್ರದಿಂದ 32 ಬ್ರಾಹ್ಮಣ ಕುಟುಂಬಗಳನ್ನು ತುಳುನಾಡಿಗೂ, ಅರುವತ್ತನಾಲ್ಕು ಕುಟುಂಬಗಳನ್ನು ಕೇರಳಕ್ಕೂ ಬರಮಾಡಿಕೊಳ್ಳುತ್ತಾನೆ. ಈ ಅಹಿಛ್ಛತ್ರವು ಗೋದಾವರಿ ನದಿ ತೀರದಲ್ಲಿದೆ. ತುಳುನಾಡಿನಲ್ಲಿ ಮೊದಲೇ ಇದ್ದ ಕೆಲವು ಪಂಗಡಗಳ
  • 3. ಮಧ್ಯೆ ಸಂಘರ್ಷಗಳು ನಡೆಯುತ್ತಿದ್ದರೂ ಅಹಿಕ್ಷೇತ್ರದಿಂದ ಬಂದ ಬ್ರಾಹ್ಮಣರಿಗೆ ಭೂಮಿಯನ್ನು ಉಂಬಳಿ ನೀಡಿ ನೆಲೆ ಮಾಡಿದ. ಅಲ್ಲದೆ ಅವರ ಕೆಲಸಕ್ಕೆ ನಾಯರ್ ಜನಾಂಗ ಮತ್ತು ತುಳುನಾಡಿನ ನಾಗ ವಂಶದವರನ್ನು ನಿಯಮಿಸಿದ. ತರುವಾಯ ಮಯೂರ ವರ್ಮನು ತನ್ನ ಮಗನಾದ ಚಂದ್ರಾಂಗದನಿಗೆ ರಾಜ್ಯಾಧಿಕಾರವನ್ನು ಬಿಟ್ಟುಕೊಟ್ಟು ತಾನು ಕಾಡಿಗೆ ಮರಳಿದ. ಮಯೂರವರ್ಮನು ಇಲ್ಲದ ರಾಜ್ಯದಲ್ಲಿ ನಾವಿರುವುದು ಬೇಡವೆಂದು ಬ್ರಾಹ್ಮಣ ಪಂಗಡಗಳು ಅಹಿಛ್ಛತ್ರಕ್ಕೆ ಮರಳಿದರು. ಈ ಸಂದರ್ಭದಲ್ಲಿ ಚಂದ್ರಾಂಗದನು ತುಳುನಾಡಿನ ಗ್ರಾಮ ಪದ್ಧತಿಗೆ ಸಂಬಂಧಿಸಿದಂತೆ ಬ್ರಾಹ್ಮಣರ ಅನುಪಸ್ಥಿತಿಯಿಂದ ತೊಂದರೆಯಾದಾಗ ಮತ್ತೆ ಅಧಿಕ ಬ್ರಾಹ್ಮಣ ಕುಟುಂಬಗಳನ್ನು ಬರಮಾಡಿಕೊಂಡನು. ಇತ್ತ ಕದಂಬ ರಾಜ ಚಂದ್ರಾಂಗದನ ಆಡಳಿತವು ಕ್ಷೀಣಿಸುತ್ತಾ ಬಂದಾಗ ತನ್ನ ಸೀಮಿತ ಪ್ರದೇಶದಲ್ಲಿ ಆಳ್ವಿಕೆಯನ್ನು ಮಾಡುತ್ತಿದ್ದ 'ಹುಬ್ಬಸಿ'ಗ ಎನ್ನುವ ಶೂದ್ರ ರಾಜನು ಎಲ್ಲಾ ಮೇಲ್ವರ್ಗದ ಬ್ರಾಹ್ಮಣರನ್ನು ಹಿಂಸಿಸತೊಡಗಿದನು. ಈ ಕಾರಣದಿಂದ ಹಲವು ಬ್ರಾಹ್ಮಣ ಪಂಗಡಗಳು ತುಳುನಾಡನ್ನು ಬಿಟ್ಟು ತಮ್ಮ ಮೂಲ ಸ್ಥಳಕ್ಕೆ ವಲಸೆ ಹೋಗಲಾರಂಭಿಸಿದರು. ಇದರಿಂದ ಕುಪಿತನಾದ ಚಂದ್ರವರ್ಮನ ಮಗ ಲೋಕಾದಿತ್ಯನು ಹುಬ್ಬಸಿಗನನ್ನು ಕೊಂದು ಅಹಿಛ್ಛತ್ರದಿಂದ ಮತ್ತೆ ಬ್ರಾಹ್ಮಣರನ್ನು ಬರಮಾಡಿಕೊಂಡನು. ಹಾಗೂ ಅವರಿಗೆ ಮರಳಿ ಅಗ್ರಹಾರಗಳನ್ನು ಒಪ್ಪಿಸಿದನು. ಆ ಕಾಲಘಟ್ಟದಲ್ಲಿ ತುಳು ನಾಡಿನ ಭಾಗವಾಗಿದ್ದ ತಾಳಗುಂದ ಮತ್ತು ಕುಪ್ಪಗದ್ದೆಯಲ್ಲಿ ಹಲವಾರು ಬ್ರಾಹ್ಮಣ ಪಂಗಡಗಳು ಅಹಿಚ್ಛತ್ರದಿಂದ ಬಂದು ನೆಲೆಯೂರಿದ್ದವು. ಸುಮಾರು ಹನ್ನೊಂದನೇ ಶತಮಾನದಲ್ಲಿ ಚೋಳರು ಆಕ್ರಮಣ ಮಾಡಿ ತಾಳಗುಂದವನ್ನು ವಶಪಡಿಸಿ ಅಲ್ಲಿನ ಬ್ರಾಹ್ಮಣರ ಪತ್ನಿಯರ, ಮಕ್ಕಳ ಮೇಲೆ ಅತ್ಯಾಚಾರ ಮಾಡಿದರು. ಅಲ್ಲದೆ ಅವರ ಪತ್ನಿಯರನ್ನು ಬಲಾತ್ಕಾರವಾಗಿ ತಮ್ಮ ರಾಣಿಯರನ್ನಾಗಿ ಮಾಡಿಕೊಂಡರು. ಈ ಆಕ್ರಮಣದಿಂದ ಭಯಭೀತರಾದ ಬ್ರಾಹ್ಮಣ ಪಂಗಡಗಳು ತುಳು ನಾಡಿಗೆ ವಲಸೆ ಬಂದರು. ಇಲ್ಲಿ ಕದಂಬ ರಾಜರ ಗ್ರಾಮ ಪದ್ಧತಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡರು. ಮತ್ತು ಕೆಲವು ಕುಟುಂಬಗಳು ಅರಸುಮನೆತನದೊಂದಿಗೆ ವೈವಾಹಿಕ ಸಂಬಂಧವನ್ನು ಬೆಳೆಸಿದರು. ಕ್ರಮೇಣ ತುಳುನಾಡಿನಲ್ಲಿ ಗ್ರಾಮಣಿಗಳಾಗಿ ಮುಂದುವರೆದರು. ಡಾ.ಜಾರ್ಜ್ ಯಂ ಮೊರೇಸ್ ರವರು ತನ್ನ ಸಂಶೋಧನಾ ಗ್ರಂಥವಾದ "A History of Ancient and Mediaeval Karnataka" ದಲ್ಲಿ "ಕದಂಬರಾಜನ ಕೋರ್ಟಿನಲ್ಲಿ ಮಾಂಡಲಿಕರು, ಮಂತ್ರಿಗಳು, ಇತರ ಅಧಿಕಾರಿಗಳು ಭಾಗವಹಿಸುತ್ತಿದ್ದರು. ಅವರೆಲ್ಲ ರಾಜನ ಹತ್ತಿರದ ಸಂಬಂಧಿಗಳಾಗಿರುತ್ತಿದ್ದರು. ಈ ಮೂಲಕ ಆಡಳಿತವು ಸುಸೂತ್ರವಾಗಿ ನಡೆಯುತ್ತಿತ್ತು. ಕಠಿಣ ಸಂದರ್ಭಗಳಲ್ಲಿ ಒಳ್ಳೆಯ ಆಡಳಿತಾತ್ಮಕ ಪರಿಜ್ಞಾನ ವನ್ನು ಹೊಂದಿರುವ ಐದು ಜನರ ಕ್ಯಾಬಿನೆಟ್ ನ್ನು ರಚಿಸಿ ಆಡಳಿತವನ್ನು ನಡೆಸುತ್ತಿದ್ದರು. ಆಡಳಿತ ವ್ಯವಸ್ಥೆಯನ್ನು ಸುಲಭವಾಗಿಸುವ ಸಲುವಾಗಿ ರಾಜ್ಯವನ್ನು ನಾಲ್ಕಾಗಿ ವಿಂಗಡನೆ ಮಾಡಲಾಗಿತ್ತು. ಅದು ಪಶ್ಚಿಮ, ಉತ್ತರ, ದಕ್ಷಿಣ, ಪೂರ್ವಗಳೆಂದು. ಮತ್ತು ಇದಕ್ಕೆ ತನ್ನ ಸಂಬಂಧಿಕರನ್ನು ಅಧಿಕಾರಿಗಳನ್ನಾಗಿ ನೇಮಿಸುತ್ತಿದ್ದರು. ಆಮೇಲೆ ಇದನ್ನು ಜಿಲ್ಲೆ , ತಾಲೂಕು, ಗ್ರಾಮಗಳಾಗಿ ವಿಂಗಡಿಸಿ ಆಡಳಿತವನ್ನು ಮಾಡುತ್ತಿದ್ದರು." ಎಂಬುದಾಗಿ ಉಲ್ಲೇಖಿಸಿದ್ದಾರೆ. ಗ್ರಾಮ ಪದ್ಧತಿಯಲ್ಲಿ ಆಡಳಿತಾರೂಢ ಕದಂಬ ರಾಜನೊಡನೆ ಹಾಗೂ ಕದಂಬ ವಂಶದೊಂದಿಗೆ ತಾಳಗುಂದ ಹಾಗೂ ಕುಪ್ಪಗದ್ದೆಯಿಂದ ವಲಸೆ ಬಂದ ಕೆಲವು ಬ್ರಾಹ್ಮಣರು ವೈವಾಹಿಕ ಸಂಬಂಧವನ್ನು ಬೆಳೆಸಿ ಅವರೊಂದಿಗೆ ರಾಜಕೀಯ ವ್ಯವಸ್ಥೆಯಲ್ಲಿ ತಮ್ಮನ್ನೂ ತೊಡಗಿಸಿಕೊಂಡರು. ಮುಂದೆ ಈ ವಂಶವು ಕಾಸರಗೋಡಿನ 'ಬಲ್ಲಾಳ' ವಂಶವೆಂದು ಕರೆಯಲ್ಪಟ್ಟಿತು. 'ಬಲ್ಲಾಳ' ಎಂಬ ಕುಲನಾಮ ಬರಲು ಹೊಯ್ಸಳರ ಪ್ರಭಾವವೇ ಕಾರಣವಾಗಿರಬೇಕು. ಈಗಲೂ ಇವರು 'ವರ್ಮ', 'ಬಲ್ಲಾಳ' ಎಂಬ ಎರಡೂ ಕುಲನಾಮಗಳಿಂದ ಕರೆಯಲ್ಪಡುತ್ತಿದ್ದಾರೆ. ಇದನ್ನು ಹಲವಾರು ಇತಿಹಾಸಕಾರರು ತಮ್ಮ ಬರಹಗಳಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಸರಿಯಾದ ಪುರಾವೆಗಳಿಲ್ಲದೆ ಕೆಲವು ಸಂಶೋಧಕರು ತುಳುನಾಡಿನ ರಾಣಿಯರು ಹಾಗೂ ಬ್ರಾಹ್ಮಣ ರೊಂದಿಗೆ ವೈವಾಹಿಕ ಸಂಪರ್ಕದಿಂದ ಜನಿಸಿದ ಪರಂಪರೆಯೇ 'ಬಂಟ ಬಲ್ಲಾಳ'ರು ಎಂಬುದಾಗಿ ತಪ್ಪಾಗಿ ವಿವರಿಸಿದ್ದಾರೆ. ಇಲ್ಲಿ ವಾಸಿಸುವ 'ಬಲ್ಲಾಳ' ವಂಶವು ಜೈನೇತರರಾಗಿದ್ದು ನಾಗವಂಶಕ್ಕೆ ಸೇರಿದವರಲ್ಲವಾದುದರಿಂದ ಬ್ರಾಹ್ಮಣರೊಂದಿಗಿನ ವೈವಾಹಿಕ ಸಂಬಂಧದಿಂದ 'ಬಂಟ ಬಲ್ಲಾಳ' ರಾದರು ಎಂಬುದಕ್ಕೆ ಯಾವುದೇ ಅರ್ಥವಿಲ್ಲ. ಬ್ರಾಹ್ಮಣರು ಮತ್ತು ಬಂಟರು ಸೇರಿದರೆ 'ಬಂಟ ಬ್ರಾಹ್ಮಣ'ರಾಗಬೇಕೆ ವಿನಃ 'ಬಲ್ಲಾಳ' ಎಂಬ ಹೊಸ ನಾಮವೋ, ವಂಶವೋ ಹುಟ್ಟಿಕೊಳ್ಳುವುದಾದರೂ ಎಂತು? ಎಂಬುದು ಜಿಜ್ಞಾಸೆಗೆ ನಿಲುಕದ ವಿಚಾರ. 12ನೇ ಶತಮಾನದ ತರುವಾಯ ಹನ್ನೊಂದನೇ ಶತಮಾನದಲ್ಲಿ ಹೊಯ್ಸಳರು ಪ್ರಬಲರಾಗಿ ಕರ್ನಾಟಕದ ಚಕ್ರವರ್ತಿಗಳಾದಾಗ ತುಳುನಾಡು ಅವರ ಕೈಸೇರಿತು. ಕುಂಬಳೆ ಕೋಟೆಯಲ್ಲಿ ಹೊಯ್ಸಳ ವೀರಬಲ್ಲಾಳನ ಚಿನ್ನದ ನಾಣ್ಯ ಸಿಕ್ಕಿದ್ದು ಇದಕ್ಕೆ ಸಾಕ್ಷಿಯನ್ನು ಒದಗಿಸುತ್ತದೆ. ಈ ಪ್ರದೇಶ ಹೊಯ್ಸಳ ಬಲ್ಲಾಳರ ಅಧಿಕಾರಕ್ಕೆ ಒಳಪಟ್ಟಾಗ ಈಗಾಗಲೇ ಅಲ್ಲಿ ಆಡಳಿತವನ್ನು ನಡೆಸುತ್ತಿದ್ದ ಕದಂಬ ರಾಜವಂಶದವರು ಹೊಯ್ಸಳರ ಪ್ರಭಾವದಿಂದ 'ಬಲ್ಲಾಳ' ಎನ್ನುವ ಕುಲನಾಮವನ್ನು ಪಡೆದಿರಬಹುದು ಎಂಬುದಾಗಿ ಡಾ. ರಾಮಭಟ್ಟರು
  • 4. ಅಭಿಪ್ರಾಯಪಟ್ಟಿದ್ದಾರೆ. ಕಾಸರಗೋಡು ಹೊರತಾಗಿ ತುಳುನಾಡಿನ ಇತರ ಕಡೆಗಳಲ್ಲಿ ನೆಲೆಸಿದ ಕೆಲವು ಅರಸರು ಜೈನ ಬಲ್ಲಾಳರಾಗಿಯೂ ಅಲ್ಲದೆ ಆಳುವ ಅಧಿಕಾರವಿದ್ದ ಪಟ್ಟ ಬಂಟರೊಂದಿಗಿನ ವೈವಾಹಿಕ ಸಂಬಂಧವನ್ನು ಹೊಂದಿ 'ಜೈನಬಲ್ಲಾಳ'ರು 'ಬಂಟಬಲ್ಲಾಳ'ರಾಗಿರಬೇಕೆಂದು ಇತಿಹಾಸಕಾರರು ಅಭಿಪ್ರಾಯ. ಇವರು ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಇಂದಿಗೂ ಅರಸರಿಗೆ ಸಲ್ಲಬೇಕಾದ ಗೌರವವನ್ನು ಪಡೆಯುತ್ತಿದ್ದಾರೆ. 12ನೇ ಶತಮಾನದಲ್ಲಿ ಮಧ್ವರ ಆಗಮನದ ನಂತರ ತುಳುನಾಡಿನಲ್ಲಿ ವೈಷ್ಣವ ದೇವಾಲಯಗಳು ಅಲ್ಲಲ್ಲಿ ನಿರ್ಮಾಣಗೊಂಡವು. 14ರಿಂದ 16 ನೇ ಶತಮಾನದ ಕಾಲಘಟ್ಟದಲ್ಲಿ ತುಳುನಾಡಿನ ಕೆಲವೊಂದು ಸೀಮೆಗಳು ಬಲ್ಲಾಳರ ಆಡಳಿತಕ್ಕೊಳಪಟ್ಟಿತ್ತು. ಅನಂತರ ಇಕ್ಕೇರಿ ಅರಸರು ಹಾಗೂ ಟಿಪ್ಪುವಿನ ಆಕ್ರಮಣದ ತರುವಾಯ ತುಳುನಾಡಿನ ಎಲ್ಲಾ ಅರಸುಮನೆತನಗಳು ಸ್ಥಿತ್ಯಂತರವಾಗಿ ಹೋದವು. ಟಿಪ್ಪು ತುಳುನಾಡಿನ ಮೇಲೆ ದಂಡೆತ್ತಿ ಬಂದು ಇಲ್ಲಿನ ಅರಮನೆಗಳನ್ನೂ,ಬೀಡುಗಳನ್ನೂ ಧ್ವಂಸಗೊಳಿಸಿದನು. ಜೊತೆಗೆ ಇದರ ಅಧಿಪತ್ಯದಲ್ಲಿದ್ದ ದೇವಾಲಯಗಳನ್ನೂ ನಾಶಮಾಡಿದನು. ಈ ಸಂದರ್ಭದಲ್ಲಿ ಅಳಿದುಳಿದ ಕೆಲವು ಅರಸುಮನೆತನಗಳು ದಿಕ್ಕುಕಾಣದೆ ಜನ ನಿಬಿಡ ಪ್ರದೇಶಗಳಿಗೆ ಓಡಿ ಹೋಗಿ ಬೀಡುಗಳನ್ನು ನಿರ್ಮಿಸಿ ವಾಸಿಸತೊಡಗಿದರೆಂಬುದಾಗಿ ಊಹಿಸಬಹುದಾಗಿದೆ. ಟಿಪ್ಪುವಿನ ಮರಣಾನಂತರ ಅಂದರೆ ಸುಮಾರು 1799ರ ಬಳಿಕ ಬಲ್ಲಾಳರು ತಾವು ಕಳೆದುಕೊಂಡ ಸಾಮ್ರಾಜ್ಯವನ್ನು ಮರು ಸ್ಥಾಪಿಸಲು ಎಷ್ಟೇ ಪ್ರಯತ್ನಿಸಿದರೂ ಅದು ಸಫಲವಾಗಲಿಲ್ಲ. ಯಾಕೆಂದರೆ ಹೆಚ್ಚಿನ ಪ್ರದೇಶಗಳು ಪರಕೀಯರ ಅಧೀನಕ್ಕೆ ಸೇರಿಹೋಗಿತ್ತು. ಆಮೇಲೆ ಬ್ರಿಟಿಷ್ ಸರ್ಕಾರ ಆಡಳಿತಕ್ಕೆ ಬಂದು ಭೂಮಿಗೆ ಸಂಬಂದಿಸಿದಂತೆ ಕೆಲವು ಕಾನೂನುಗಳನ್ನು ಜಾರಿಗೊಳಿಸಿದರು. ಅದರಂತೆ "ಲ್ಯಾಂಡ್ ರಿಫಾರ್ಮ್ ಆಕ್ಟ್ " ಜಾರಿಗೆ ಬಂದ ನಂತರ ಬಲ್ಲಾಳ ವಂಶಗಳ ಅಧೀನದಲ್ಲಿದ್ದ ಭೂಮಿಯು ಪರಕೀಯರ ಪಾಲಾಗಿ ಹೋಯಿತು. ಆಮೇಲೆ ಇವರಲ್ಲಿ ಕೆಲವರು ಬ್ರಿಟಿಷ್ ಸರ್ಕಾರದ ಕೈಕೆಳಗೆ ಗ್ರಾಮಣಿಗಳಾಗಿ ಕೆಲಸ ನಿರ್ವಹಿಸಲಾರಂಭಿಸಿದರು. ತುಳುನಾಡಿನಲ್ಲಿ ಇರುವಂತಹ ಅರಮನೆಗಳು ನಶಿಸಿ ಹೋದರೂ 'ಬಲ್ಲಾಳರಸರು' ನಿರ್ಮಿಸಿ, ನಂಬಿಕೊಂಡು ಬಂದಿರುವಂತಹ ದೇವಾಲಯಗಳಲ್ಲಿ ಇಂದಿಗೂ ಅಷ್ಟಮಂಗಲ ಪ್ರಶ್ನೆಗಳು ನಡೆದಾಗ ಈ ದೇವಸ್ಥಾನವು 'ಬಲ್ಲಾಳರಸ'ರಿಂದ ನಿರ್ಮಿಸಲ್ಪಟ್ಟಿದ್ದೆಂದು ಕಂಡುಬರುತ್ತದೆ. ಎಂದು ಹೇಳುವುದನ್ನು ಗಮನಿಸಬಹುದು. ಹದಿನೆಂಟನೇ ಶತಮಾನದ ಆದಿಯಲ್ಲಿ ಕುಂಬಳೆ ಅರಸರ ಇನ್ನೊಂದು ವಿಭಾಗವು ಆಡಳಿತದಿಂದ ಬೇರ್ಪಟ್ಟು ಸ್ವತಂತ್ರವಾಗಿ ಸುಮಾರು 1808 ರಿಂದ ತಮ್ಮನ್ನು 'ರಾಮಂತರಸರು' ಎಂಬುದಾಗಿ ಕರೆಯಿಸಿಕೊಂಡು ಮಾಯಿಪ್ಪಾಡಿ ಅರಮನೆಯನ್ನು ನಿರ್ಮಿಸಿ ವಾಸ ಮಾಡತೊಡಗಿದರೆಂಬುದು ಇತಿಹಾಸಕಾರರ ಅಭಿಪ್ರಾಯ. ಇದಕ್ಕೆ ಪೂರಕವಾಗಿ ಈಗ ಕಂಡುಬರುವ ಮಾಯಿಪ್ಪಾಡಿ ಅರಮನೆಗೆ ಕೇವಲ 220 ವರ್ಷಗಳ ಇತಿಹಾಸ ಮಾತ್ರವಿರುವುದನ್ನು ಗಮನಿಸಬಹುದು. 'ಥಾಮಸ್ ಮನ್ರೋ' ಪ್ರಕಾರ ಕುಂಬ್ಳೆ ರಾಜ್ಯದಲ್ಲಿ 72 ಗ್ರಾಮಗಳು ಇದ್ದವು. (ಅವುಗಳು ಅಡೂರಿನಲ್ಲಿ 7ಗ್ರಾಮಗಳು, ಪೆರಡಾಲದಲ್ಲಿ 2, ಅಂಗಡಿಮೊಗರಿನಲ್ಲಿ 10, ವರ್ಕಾಡಿಯಲ್ಲಿ 2 ,ಕಾಸರಗೋಡಿನಲ್ಲಿ 2, ಮಂಜೇಶ್ವರದಲ್ಲಿ 32, ಕುಂಬಳೆಯಲ್ಲಿ 9, ಮೊಗ್ರಾಲ್ ನಲ್ಲಿ 8.) ಇವುಗಳನ್ನು ಜಿಲ್ಲೆ, ತಾಲೂಕು ಎಂಬುದಾಗಿ ವಿಂಗಡಣೆ ಮಾಡಿ ಕದಂಬ ವಂಶಸ್ಥರು ಹಾಗೂ ಅವರ ಸಂಬಂಧಿಕರು ಆಡಳಿತ ನಡೆಸುತ್ತಿದ್ದರು. ವಿಜಯನಗರ ಸಾಮ್ರಾಜ್ಯದ ಪತನಾನಂತರ ವಿಟ್ಲ ಸೇರಿದಂತೆ ಇಡೀ ತುಳುನಾಡು ಕೆಳದಿ ಅರಸರ ವಶವಾಯಿತು. ಕೆಳದಿಯ ಅರಸ ವೆಂಕಟಪ್ಪನಾಯಕ (1586-1629) ನ ಆಡಳಿತಾವಧಿಯಲ್ಲಿ ತುಳುನಾಡಿನ ಎಲ್ಲಾ ಅರಸರನ್ನು ತನ್ನ ಸಾಮಂತರನ್ನಾಗಿ ಮಾಡಿಕೊಂಡು ಕಪ್ಪವನ್ನು ಸಲ್ಲಿಸುವಂತೆ ಒತ್ತಡ ಹೇರಿದನು. ಆದರೆ ಕುಂಬಳೆ ಸೀಮೆಗೆ ಸಂಬಂಧಪಟ್ಟ ರಾಜವಂಶವು ಸಂಘಟಿತರಾಗಿದ್ದುದರಿಂದ ಕೆಳದಿ ಅರಸರಿಗೆ ಕಪ್ಪ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಇದರಿಂದ ಕುಪಿತನಾದ ವೆಂಕಟಪ್ಪ ನಾಯಕನು 1628 ರಲ್ಲಿ ಕಾಸರಗೋಡು ಬಲ್ಲಾಳರ ಮೇಲೆ ಯುದ್ಧ ಸಾರಿದನು. ಈ ಯುದ್ಧದಲ್ಲಿ ಸೋತ ಕೆಲವು ಬಲ್ಲಾಳರು ತಿರುವಾಂಕೂರು ರಾಜನ ಬಳಿಗೆ ಹೋದರು. ಮತ್ತೆ ಕೆಲವರು ನಾಡಿನ ಬೇರೆಬೇರೆ ಕಡೆಗಳಿಗೆ ಹೋಗಿ ನೆಲೆಸಿದರು. ವೆಂಕಟಪ್ಪನಾಯಕನು ಕ್ರಿಸ್ತ ಶಕ 1629 ರಲ್ಲಿ ಗತಿಸಿದ ಮೇಲೆ ತುಳುನಾಡಿನ ಅನೇಕ ಅರಸು ಮನೆತನಗಳು ಆತನ ಉತ್ತರಾಧಿಕಾರಿ ವೀರಭದ್ರ ನಾಯಕನ ವಿರುದ್ಧವಾಗಿ ದಂಗೆಯೆದ್ದರು. "ಸ್ಥಳೀಯ ಅರಸರು ದಂಗೆ ಎದ್ದಾಗ ವಿಟ್ಲದ ಅರಸರು ಕೂಡ ಪಾಲ್ಗೊಂಡಿದ್ದರು" ಎಂಬುದಾಗಿ ಡಾ| ಗುರುರಾಜ ಭಟ್ಟರು ಅಭಿಪ್ರಾಯಪಡುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಎರಡು ಪೋರ್ಚುಗೀಸ್ ದಾಖಲೆಗಳಿವೆ. ಅದರಲ್ಲಿ ಪ್ರಮುಖವಾದದ್ದು ಗೋವಾದಲ್ಲಿದ್ದ ಪೋರ್ಚುಗೀಸ್ ವೈಸರಾಯ್ ಗೆ ಎಲ್ ಡಿ ಸೋಜಾ ಡಿ ಮಿನೇಜಸ್ ಎಂಬವರು 16-01-1630 ರಲ್ಲಿ ಬರೆದಿದ್ದ ಕರಪತ್ರ. ಅದರಲ್ಲಿ "ತುಳುನಾಡಿನ ಅರಸರು ನಡೆಸಿದ ದಂಗೆಯಲ್ಲಿ ಪಾಲ್ಗೊಂಡಿದ್ದ "ವಿಟ್ಲದ ಬಲ್ಲಾಳ" ಎಂದು ಸಂಬೋಧಿಸಿರುವುದನ್ನು ಕಾಣಬಹುದು. ಇದರಿಂದ ತಿಳಿಯುವುದೇನೆಂದರೆ ತುಳುನಾಡಿನ ಬಲ್ಲಾಳ ಅರಸರು ಎದ್ದ ದಂಗೆಯಲ್ಲಿ ವಿಟ್ಲದ ಅರಸನೂ ಕೂಡ ಕೈಜೋಡಿಸಿದ್ದ ಎಂಬುದು. ಈಗಲೂ ಇಲ್ಲಿನ ಬಲ್ಲಾಳ ಮನೆತನದವರಿಗೆ ವಿಟ್ಲದ
  • 5. ಅರಸು ಮನೆತನದೊಂದಿಗೆ ವೈವಾಹಿಕ ಸಂಬಂಧವಿರುವುದನ್ನು ಕಾಣಬಹುದು. ಆದರೂ ಆ ಕಾಲದಲ್ಲಿ ಕೆಳದಿ ನಾಯಕರ ಆಕ್ರಮಣ ಗಳಿಂದ ಮುಕ್ತಿಯನ್ನು ಹೊಂದಲು ಸಾಧ್ಯವಾಗಲಿಲ್ಲ ಎಂಬುದು ತಿಳಿದು ಬರುತ್ತದೆ. ಕ್ರಿಸ್ತಶಕ 1763ರಲ್ಲಿ ಕರ್ನಾಟಕದ ಕರಾವಳಿಯ ಮೇಲೆ ಹೈದರಾಲಿಯು ತನ್ನ ಅಧಿಕಾರವನ್ನು ಸ್ಥಾಪಿಸಿ ಕೊಡಬೇಕಾಗಿದ್ದ ಕಪ್ಪಕಾಣಿಕೆಗಳ ಮೌಲ್ಯವನ್ನು ಹೆಚ್ಚಿಸಿ ಇಲ್ಲಿನ ರಾಜಕೀಯ ವ್ಯವಸ್ಥೆಯಲ್ಲಿ ಸ್ಥಿತ್ಯಂತರ ಉಂಟು ಮಾಡಿದನು. ಅವನು ನೇರವಾಗಿ ಇಲ್ಲಿನ ಅರಮನೆಗಳ ಮೇಲೆ ದಾಳಿ ಮಾಡತೊಡಗಿದನು. ಆಗ ರಾಜ ಕುಟುಂಬಗಳು ಜೀವ ರಕ್ಷಣೆಯ ಭಯದಿಂದ ಬೇರೆ ಬೇರೆ ಕಡೆಗಳಿಗೆ ಓಡಿಹೋಗಿ ನೆಲೆಸಬೇಕಾಯಿತು. ಇವನ ನಂತರ 1783ರ ಆಸುಪಾಸಿನಲ್ಲಿ ತುಳುನಾಡಿನ ಮೇಲೆ ಹೈದರಾಲಿಯ ಮಗನಾದ ಟಿಪ್ಪು ಸುಲ್ತಾನನು ಆಕ್ರಮಣ ಮಾಡಿ ಬಲ್ಲಾಳವಂಶಸ್ಥರ ಅರಮನೆಗಳನ್ನೂ ಅದರ ಅಧೀನಕ್ಕೆ ಒಳಪಟ್ಟ ದೇವಾಲಯಗಳನ್ನೂ ಧ್ವಂಸಮಾಡಿದನು. ಇದರಿಂದ ಭಯಭೀತರಾದ ಅರಸು ವಂಶಸ್ಥರು ತಾವಿದ್ದ ಅರಮನೆಗಳನ್ನು ಬಿಟ್ಟು ನಿರ್ಜನ ಪ್ರದೇಶಗಳಲ್ಲಿ ಮತ್ತೆ 'ಬೀಡು'ಗಳನ್ನು ನಿರ್ಮಿಸಿ ವಾಸಿಸತೊಡಗಿದರೆಂಬುದಾಗಿ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಆದ್ದರಿಂದಲೇ ಪ್ರಸ್ತುತ ಕಾಸರಗೋಡಿನ 'ಅಷ್ಟ ಬಲ್ಲಾಳ' ವಂಶದವರಿಗೆ ಕೆಲವು ಕಡೆಗಳಲ್ಲಿ ಬೀಡುಗಳೂ ಇನ್ನೂ ಕೆಲವು ಕಡೆಗಳಲ್ಲಿ ಅರಮನೆಗಳೂ ಇರುವುದನ್ನು ಕಾಣಬಹುದು. ಇತ್ತೀಚೆಗೆ ಅರಮನೆಗಳು ಜೀರ್ಣಾವಸ್ಥೆಯನ್ನು ಹೊಂದಿದಾಗ ಮತ್ತೆ ಅಷ್ಟೊಂದು ದೊಡ್ಡ ಅರಮನೆಗಳನ್ನು ನಿರ್ಮಿಸುವುದು ಸುಲಭದ ಕೆಲಸವಲ್ಲದ ಕಾರಣದಿಂದ ವಿಶಾಲವಾದ 'ಬೀಡು'ಗಳನ್ನು ತಾವೇ ನಿರ್ಮಿಸಿಕೊಂಡಿರುವುದನ್ನು ಕಾಣಬಹುದಾಗಿದೆ. 1784 ರಲ್ಲಿ ಟಿಪ್ಪುಸುಲ್ತಾನನು ವಿಟ್ಲದ ಅರಸನಾದ ಅಚ್ಚುತ ಹೆಗ್ಗಡೆಯ ಶಿರಚ್ಛೇದನ ಮಾಡಿದ್ದಲ್ಲದೆ ವಿಟ್ಲದ ಅರಮನೆಯನ್ನೂ ಸುಟ್ಟುಹಾಕಿದನು. ಇದರಿಂದಾಗಿ ದಿಕ್ಕು ಕಾಣದ ವಿಟ್ಲದ ಅರಸು ಮನೆತನದವರು ಹತ್ತಿರದ ಎರುಂಬು ಎಂಬ ಪ್ರದೇಶಕ್ಕೆ ಹೋಗಿ ನೆಲೆಸಿದರು. 1799 ರಲ್ಲಿ ನಾಲ್ಕನೇ ಮೈಸೂರು ಯುದ್ಧದಲ್ಲಿ ಟಿಪ್ಪು ಕೊಲ್ಲಲ್ಪಟ್ಟ ನಂತರ ತುಳುನಾಡು ಬ್ರಿಟಿಷರ ಆಡಳಿತಕ್ಕೊಳಪಟ್ಟಿತು. ಎಪ್ರಿಲ್16,1882 ರಲ್ಲಿ ಬೇಕಲ ತಾಲೂಕು ಆಗಿದ್ದ ಕಾಸರಗೋಡು ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿತು. ಅದಾದ ಕೆಲ ವರ್ಷಗಳ ತರುವಾಯ ಕಾಸರಗೋಡು ತಾಲೂಕಿನ ರಚನೆಯಾಯಿತು. ಬ್ರಿಟಿಷರು ಕುಂಬಳೆ ರಾಜರನ್ನು ಹಾಗೂ ಅವರ ರಾಜಕೀಯ ಸಂಬಂಧಿಕರನ್ನು ಬಂಧಿಸಿದರು. ಈ ಸಮಯದಲ್ಲಿ ಕುಂಬಳೆಯ ರಾಜ ಮನೆತನದ ಕೆಲವರು ಕೋಲತ್ತಿರಿ ರಾಜನ ಸಹಾಯವನ್ನು ಪಡೆದುಕೊಂಡರು. ತದನಂತರ ಕೇರಳದ ಪ್ರತಿಷ್ಠಿತ ಮಲೆಯಾಳಿ ನಾಯರ್ ಮನೆತನ ದೊಂದಿಗೆ ವೈವಾಹಿಕ ಸಂಬಂಧವನ್ನೂ ಬೆಳೆಸಿದರು. ಇವರು 1808 ರಿಂದ ಮಾಯಿಪ್ಪಾಡಿ ಯಲ್ಲಿ ಅರಮನೆಯನ್ನು ನಿರ್ಮಿಸಿ ರಾಮಂತರಸುಗಳೆಂಬ ಕುಲನಾಮದಿಂದ ಪ್ರಖ್ಯಾತಿ ಪಡೆದರು. ಇದೇ ವಂಶದ ಕೆಲವರು ನಾಯರ್‌ಮನೆತನದ ಸಂಬಂಧವನ್ನು ವಿರೋಧಿಸಿ ಬೇರೆಯಾಗಿ ಉಳಿದು ಬಿಟ್ಟರು. ಎಂಬುದಾಗಿ ಊಹಿಸಬಹುದು. ಆ ವಂಶಜರು ಕುಂಬಳೆಯಿಂದ ವಿಭಾಗಿಸಲ್ಪಟ್ಟಾಗ ವಿಟ್ಲದ ಅರಸರೊಂದಿಗೆ ಸಂಬಂಧವನ್ನು ಬೆಳೆಸಿದರೆಂದು ಹೇಳಬಹುದಾಗಿದೆ. ಈ ಬಲ್ಲಾಳ ಮನೆತನದಲ್ಲಿ ಈಗಲೂ 'ಅಷ್ಟ ಬಲ್ಲಾಳ'ರು ಎಂಬುದಾಗಿ 8 ಮನೆತನಗಳಿಂದ ಕೂಡಿದ ಬಲ್ಲಾಳ ವಂಶಸ್ಥರು ಇದ್ದಾರೆ. ಇದರಲ್ಲಿ ಕೆಲವು ವಂಶವು ನಶಿಸಿಹೋಗಿ ಇನ್ನು ಕೆಲವು ಸಂತತಿಗಳು ಎರಡಾಗಿ ವಿಭಾಗಿಸಲ್ಪಟ್ಟಿದೆ. ಇದಕ್ಕೆ ಸಾಕ್ಷಿಯಾಗಿ ಈಗಲೂ ಕಾಸರಗೋಡಿನಲ್ಲಿ ಬಲ್ಲಾಳರ ಅಷ್ಟ ಮನೆತನಗಳನ್ನು ಕಾಣಬಹುದಾಗಿದೆ. ಹಾಗೆಯೇ ಒಂದೊಂದು ಮನೆತನಕ್ಕೂ ಒಂದೊಂದು ಪ್ರತಿಷ್ಠಿತ ಮನೆತನದ ತಂತ್ರಿಗಳು,ತಾಂತ್ರಿಕ ಕಾರ್ಯಗಳನ್ನು ನಡೆಸಲು ಹಾಗೂ ಧಾರ್ಮಿಕ ಸಲಹೆಗಳನ್ನು ನೀಡಲು ಇರುತ್ತಿದ್ದರು. 'ಕದಂಬ ಕೋರ್ಟ'ಗೆ ಪೂರಕವೆಂಬಂತೆ ಬಲ್ಲಾಳ ಮನೆತನಕ್ಕೆ ನಾಲ್ಕು ಸುತ್ತಿನ ಅರಮನೆ, ಊರಿನ‌ ನ್ಯಾಯ ತೀರ್ಮಾನಕ್ಕೆ ಅರಮನೆಯ ಮುಂದೆ 'ಪಡಿಪ್ಪಿರೆ'ಗಳು ಇತ್ತು. ಇದರ ಕುರುಹುಗಳು ಇನ್ನೂ ಕೆಲವೆಡೆ ಜೀವಂತವಾಗಿ ಕಾಣಸಿಗುತ್ತವೆ. ಅದು ಮಾತ್ರವಲ್ಲದೆ ಇವರ ಅಧೀನಕ್ಕೊಳಪಟ್ಟ ದೇವಾಲಯಗಳ ರಾಜಾಂಗಣದಲ್ಲಿ ನ್ಯಾಯ ತೀರ್ಮಾನಕ್ಕೆ 'ಪಟ್ಟದ ಕಲ್ಲು' ಹಾಸಲಾಗುತ್ತಿತ್ತು. ಇದನ್ನೂ ಸಹ ಕೆಲವು ದೇವಾಲಯಗಳಲ್ಲಿ ಈಗಲೂ ಕಾಣಬಹುದಾಗಿದೆ.(ಕಾರಡ್ಕ ಬಲ್ಲಾಳರ ಆಡಳಿತ ಕ್ಕೊಳಪಟ್ಟ ಮುಂಡೋಳು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಾಜಾಂಗಣದಲ್ಲಿ ಕಾಣಬಹುದಾಗಿದೆ) ಈ ಬಲ್ಲಾಳ ವಂಶಗಳಲ್ಲಿ ಒಂದು ವಂಶವು ನಿರ್ವಂಶವಾದರೆ ಬೇರೊಂದು ವಂಶದ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಪಧ್ಧತಿಯಿತ್ತು ಎಂದು ತಿಳಿಯಲ್ಪಡುತ್ತದೆ. ಆಡಳಿತ ವ್ಯವಸ್ಥೆ ಕದಂಬರ ಕಾಲದಲ್ಲಿ ಆಡಳಿತ ನಡೆಯುತ್ತಿದ್ದಂತೆ ಅನಂತರದ ಹೊಯ್ಸಳರು, ವಿಜಯ ನಗರದ ಅರಸರು, ಇಕ್ಕೇರಿಯ ಅರಸರು ಆಡಳಿತವನ್ನು ನಡೆಸಿದರೂ 'ಸೀಮೆ', 'ಮಾಗಣೆ'ಯ ವ್ಯವಸ್ಥೆಯು ಈ ಹಿಂದಿನಂತೆ ಮುಂದುವರಿಯುತ್ತಿತ್ತು ಎಂಬುದನ್ನು ಚರಿತ್ರೆಯ ಪುಟಗಳಿಂದ ತಿಳಿಯಬಹುದು. ಸೀಮೆಯ ಉಪ ದೇವಾಲಯಗಳ ಹಾಗೂ ಇತರ ದೇವಾಲಯಗಳ ಆಡಳಿತವನ್ನು ಆ ಪ್ರದೇಶದ ಬಲ್ಲಾಳ ವಂಶಸ್ಥರೇ ನೋಡಿಕೊಳ್ಳುತ್ತಿದ್ದರು ಎಂಬುದಾಗಿ ತಿಳಿದು ಬರುತ್ತದೆ. ಈಗಲೂ ಕೆಲವೊಂದು ದೇವಸ್ಥಾನಗಳಲ್ಲಿ ಇವರೇ
  • 6. ಆನುವಂಶಿಕ ಮೊಕ್ತೇಸರರಾಗಿದ್ದಾರೆ. ಮತ್ತು ಕೆಲವೊಂದು ದೇವಾಲಯಗಳು ಗುತ್ತಿನವರು, ಬ್ರಾಹ್ಮಣರು ಮತ್ತು ಇತರ ಪಂಗಡಗಳ ಅಧೀನದಲ್ಲಿದೆ. ಆದರೆ, ಕೆಲವೊಂದು ಕಡೆಗಳಲ್ಲಿ ಆಯಾ ಬಲ್ಲಾಳ ವಂಶದ ಹಿರಿಯರನ್ನು ಕರೆದು ರಾಜ ಮರ್ಯಾದೆಯನ್ನು ನೀಡಿ ದೇವಾಲಯಗಳ ಕಾರ್ಯಕ್ರಮಗಳನ್ನು ನಡೆಸುವ ಪದ್ಧತಿ ಇತ್ತೀಚೆಗಿನವರೆಗೆ ಪ್ರಚಲಿತದಲ್ಲಿತ್ತು.(ಉದಾ: ಪಂಜ ಸದಾಶಿವ ಪಂಚಲಿಂಗೇಶ್ವರ ದೇವರ ಜಾತ್ರೆಯ ಸಂದರ್ಭದಲ್ಲಿ ಕುಡಾಲು ಬೀಡಿನ ಕೇಮರ ಬಲ್ಲಾಳರನ್ನು ವಾದ್ಯ ಘೋಷಗಳೊಂದಿಗೆ ಮೆರವಣಿಗೆಯ ಮೂಲಕ ಕೊಂಡುಹೋಗುವ ಪದ್ದತಿ ಇತ್ತು. ಹಾಗೆಯೆ ಪೈವಳಿಕೆ ಅರಮನೆಯ ಅರಸರನ್ನೂ ಸಹ ವಾದ್ಯಘೋಷಗಳೊಂದಿಗೆ ಕಾರ್ಯಕ್ರಮಗಳಿಗೆ ಕರೆದೊಯ್ಯುವ ಪದ್ಧತಿ ಈಗಲೂ ಇದೆ.) ಹದಿನೆಂಟನೆಯ ಶತಮಾನದ ನಂತರ ಆಡಳಿತ ವ್ಯವಸ್ಥೆಯಲ್ಲಾದ ಬದಲಾವಣೆಗಳು 18ನೆಯ ಶತಮಾನದ ತರುವಾಯ ತುಳುನಾಡಿನ ಆಡಳಿತ ವ್ಯವಸ್ಥೆಯಲ್ಲಿ ಧಾರ್ಮಿಕವಾಗಿ, ಸಾಮಾಜಿಕವಾಗಿ ಹಾಗು ರಾಜಕೀಯವಾಗಿ ಕಾಲಕ್ಕೆ ತಕ್ಕಂತೆ ಬದಲಾವಣೆಗಳಾಗುತ್ತ್ತಾ ಹೋಯಿತು. ಇದಕ್ಕೆ ಪೂರಕವೆಂಬಂತೆ ಬಲ್ಲಾಳ ವಂಶಸ್ಥರ ದೇವಸ್ಥಾನ, ದೈವಸ್ಥಾನ ಮತ್ತು ಅವರ ಸಾಮಾಜಿಕ ಹಾಗೂ ಆಡಳಿತಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳಲ್ಲಿ ಪ್ರತಿಯೊಂದು ಪಂಗಡದ ಜನರೂ ಅವರವರ ಕುಲ ಕಸುಬುಗಳಿಗೆ ಹೊಂದಿಕೊಂಡು ಒಂದೊಂದು ಜವಾಬ್ಧಾರಿಗಳನ್ನು ನಿರ್ವಹಿಸುತ್ತಿದ್ದರು. ಬ್ರಾಹ್ಮಣ ವರ್ಗವು ರಾಜಪುರೋಹಿತರಾಗಿಯೂ, ದೇವಸ್ಥಾನದ ಅರ್ಚಕರಾಗಿಯೂ, ಅಡಳಿತ ವ್ಯವಸ್ಥೆಯಲ್ಲಿ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಸೇನಾಧಿಪತಿ ಸ್ಥಾನವನ್ನು ಗುತ್ತಿನ ಬಂಟ ವರ್ಗದವರು ನಿರ್ವಹಿಸುತ್ತಿದ್ದರು. ಗುತ್ತು, ಭಾವ, ಬಾಳಿಕೆ, ಪರಾರಿ ಇವು ನಾಲ್ಕು ಬಂಟ ಸಮಾಜದ ಗುರಿಕಾರ ಸ್ಥಾನಗಳು. ಈ ಸ್ಥಾನಮಾನಗಳು ಪರಂಪರಾನುಗತವಾಗಿದ್ದು ಅರಸನ ದರ್ಬಾರಿನಲ್ಲಿ, ದೈವ ದೇವರುಗಳ ಉತ್ಸವಗಳಲ್ಲಿ ಸಾಮಾಜಿಕ ಸಮಾರಂಭಗಳಲ್ಲಿ, ನ್ಯಾಯ ಸಭೆಗಳಲ್ಲಿ ಇವರು ಉನ್ನತ ಸ್ಥಾನವನ್ನು ಗಳಿಸಿದ್ದರು. ಈ ಗುರಿಕಾರರಿಗೆ 'ರಾಜ ಗುತ್ತಿನವರು' ಎಂಬ ಹೆಸರನ್ನು ನೀಡಿ ದಂಡನಾಯಕನ ಪಟ್ಟವನ್ನು ನೀಡಲಾಗುತ್ತಿತ್ತು. ಸೀಮೆಗೆ ಅಥವಾ ಮಾಗಣೆಗೆ ಸಂಬಂಧಿಸಿದ ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಸಮಸ್ಯೆಗಳು ಅರಸರ ದರ್ಬಾರಿನಲ್ಲಿ ಗುರಿಕಾರರೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನಕ್ಕೆ ಬರಲಾಗುತ್ತಿತ್ತು. ಸುವ್ಯವಸ್ಥಿತ ಜೀವನ, ಶಾಂತಿಪಾಲನೆ, ದೈವ ದೇವಸ್ಥಾನಗಳಲ್ಲಿ ನಡೆಯಬೇಕಾದ ವಿನಿಯೋಗಗಳ ನಿರ್ವಹಣೆ ಕಂದಾಯ ವಸೂಲಿ, ಸೈನ್ಯದ ನಿರ್ವಹಣೆ ಮತ್ತು ಸರಂಜಾಮುಗಳ ಒದಗಣೆ ಇವು ಗುರಿಕಾರರ ಹೊಣೆಯಾಗಿತ್ತು. ನ್ಯಾಯ ತೀರ್ಮಾನಗಳು ಅರಮನೆಯ 'ಪಡಿಪ್ಪಿರೆ' ಮತ್ತು ದೇವಸ್ಥಾನಗಳಲ್ಲಿ ನಡೆಯುತ್ತಿತ್ತು. 'ಗುರಿಕಾರ' ಪದವಿಯ ಗುರುತಾಗಿ ಗುರಿಕಾರನಿಗೆ ಸೀಮೆಯ ಅರಸರ ವತಿಯಿಂದ ಬಂಗಾರದ ಬಳೆಗಳನ್ನು ತೊಡಿಸಲಾಗುತ್ತಿತ್ತು . ಬಲ್ಲಾಳ ಅರಸರ ಪಟ್ಟಾಭಿಷೇಕದ ಸಂದರ್ಭದಲ್ಲಿ ಪಟ್ಟದ ಉಂಗುರದಲ್ಲಿ ಸೀಮೆಯ ದೇವರ ಹೆಸರನ್ನು ಬರೆಯಲಾಗುತ್ತಿತ್ತು. ಸಾಂಪ್ರದಾಯಿಕ ವಿಧಿವಿಧಾನಗಳು ರಾಜಪುರೋಹಿತರ ಮೂಲಕ ನಡೆಯುವುದರೊಂದಿಗೆ ಆ ಕಟ್ಟಲೆಗಳಲ್ಲಿ ಸೀಮೆಯ ಪ್ರತೀ ವರ್ಗದ ಜನರಿಗೂ ಪ್ರಧಾನ ಪಾತ್ರ ಇರುತ್ತಿತ್ತು. ಪಟ್ಟಾಭಿಷೇಕದ ಸಂದರ್ಭದಲ್ಲಿ ಪಟ್ಟದ ಪೀಠದಲ್ಲಿ ಕುಳಿತುಕೊಳ್ಳಿಸುವ ಅಧಿಕಾರವನ್ನು ರಾಜ ಗುತ್ತಿನ ಗುರಿಕಾರನೂ, ಅರಸರ ಬೆರಳಿಗೆ ಉಂಗುರವನ್ನು ತೊಡಿಸುವ ಹಕ್ಕನ್ನು ಎರಡನೇ ಗುರಿಕಾರನೂ, ಪಟ್ಟದ ಖಡ್ಗವನ್ನು ಒಪ್ಪಿಸುವ ಗೌರವವನ್ನು ಮೂರನೇ ಗುರಿಕಾರನೂ, ಪಟ್ಟದ ಹೊಸ ಹೆಸರನ್ನು ಹೇಳಿ ಮೂರು ಸಲ ಕರೆಯುವ ಹಕ್ಕನ್ನು ನಾಲ್ಕನೆಯ ಗುರಿಕಾರನು ಹೊಂದಿದ್ದರು. "ಪಟ್ಟಾಭಿಷಿಕ್ತ" ಅರಸರು ರಾಜ ಮರ್ಯಾದೆಯ ಗುರುತುಗಳಾದ 'ಅಡ್ಡಪಲ್ಲಕ್ಕಿ', 'ಛತ್ರ ಚಾಮರ' ಹಾಗೂ 'ಹಗಲು ದೀವಟಿಗೆ'ಗಳನ್ನು ಉಪಯೋಗಿಸಲು ಅರ್ಹರಾಗಿದ್ದರು. ಇವರು ಸಾಮಂತ ಅರಸರಾದರೂ ಸ್ವತಂತ್ರ ರಾಜ್ಯಭಾರದ ಅಧಿಕಾರವಿತ್ತು .ಆದರೆ ಸಾಮ್ರಾಟನಿಗೆ ನಿಯಮದಂತೆ ಕಂದಾಯವನ್ನು ಕ್ಲಪ್ತ ಸಮಯಕ್ಕೆ ಸಂದಾಯ ಮಾಡುವರೇ ಮತ್ತು ಅವರ ಆಜ್ಞೆಗಳನ್ನು ಪಾಲಿಸಲು ಬದ್ಧರಾಗಿದ್ದರು. [ಇದು ಸಂಶೋಧನಾ ದೃಷ್ಟಿಯಿಂದ ಸಂಗ್ರಹಿಸಿರುವ ಮಾಹಿತಿಗಳಾದುದರಿಂದ ಕೃತಿ ಚೌರ್ಯ ಮಾಡುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಕೃತಿ ಚೌರ್ಯ ಮಾಡಿದುದು ಕಂಡುಬಂದಲ್ಲಿ ಅಂತಹ ವ್ಯಕ್ತಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು.]